Dharwad, Sec. 5: “Teachers have the responsibility to prepare well-educated students and lay the foundation for the prosperity of the country. Therefore, there is no other profession like teaching. Teachers have the greatest power to satisfy their hunger for knowledge. They need to realize their responsibility and act accordingly”, said Sri Srinivasa Vadappi, a retired teacher. He spoke as the Chief Speaker of the Teacher’s Day program held at Rashtrottana Vidya Kendra – Dharwad, Niralakatti. “The contribution of teachers is very important for building a strong society and a strong nation. Only those who have social thinking and concerns can become good teachers”, he said. In this context, today’s program especially Dr. Sarvepalli Radhakrishnan was commemorated.
- Speeches and singing about Dr. Sarvepalli Radhakrishnan by students, along with cultural programs by teachers, were held.
ಧಾರವಾಡ, ಸೆ. 5: “ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದ ಅಭ್ಯುದಯಕ್ಕೆ ಅಡಿಪಾಯ ಹಾಕುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಶಿಕ್ಷಕ ವೃತ್ತಿಯಂತಹ ವೃತ್ತಿ ಮತ್ತೊಂದಿಲ್ಲ. ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಚ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕಾಗಿದೆ” ಎಂದು ನಿವೃತ್ತ ಶಿಕ್ಷಕರಾದ ಶ್ರೀ ಶ್ರೀನಿವಾಸ ವಡಪ್ಪಿ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದರು. “ಸದೃಢ ಸಮಾಜ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮುಖ್ಯವಾದದ್ದು. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರು ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ” ಎಂದರು. ಇದೇ ಸಂದರ್ಭದಲ್ಲಿ ಇವತ್ತಿನ ಕಾರ್ಯಕ್ರಮದ ವಿಶೇಷವಾಗಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸಲಾಯಿತು.
- -ವಿದ್ಯಾರ್ಥಿಗಳಿಂದ ಸರ್ವೇಪಲ್ಲಿ ಡಾ. ರಾಧಾಕೃಷ್ಣನ್ ಅವರ ಕುರಿತು ಭಾಷಣ, ಗಾಯನ, ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.





