Dharwad, May. 15-19: The 1st Teacher Rejuvenation Workshop of the current academic year, which will be held for 5 days, was started herein Rashtrotthana Vidya Kendra – Dharwad, Neeralkatti.
*Sri Raghavendra Ambekara, Secretary of the school, inaugurated the workshop and gave introductory remarks, saying, “Change in society is possible only through education. Rashtrotthana School is a school that teaches children culture and values. Therefore, training workshops will be beneficial for teachers to improve the quality of teachers.”
*Principal Smt. Anita Rai said, “A teacher is a learner. He is constantly learning. Training workshops do the work of invigorating teachers. Let us get trained and participate in building a healthy and sustainable society.”

ಧಾರವಾಡ, ಮೇ. 15-19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ 5 ದಿನಗಳ ಕಾಲ ಐದು ದಿನಗಳ ಕಾಲ ನಡೆಯಲಿರುವ ಪ್ರಸ್ತುತ ಶೈಕ್ಷಣಿಕ ವರ್ಷದ 1ನೇ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಪ್ರಾರಂಭಿಸಲಾಯಿತು.
*ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ,”ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ರಾಷ್ಟ್ರೋತ್ಥಾನ ಶಾಲೆ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿಕೊಡುವ ಶಾಲೆಯಾಗಿದೆ. ಹೀಗಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ತರಬೇತಿ ಕಾರ್ಯಾಗಾರಗಳು ಶಿಕ್ಷಕರಿಗೆ ಪ್ರಯೋಜನಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
*ಪ್ರಾಚಾರ್ಯರಾದ ಶ್ರೀಮತಿ ಅನಿತಾ ರೈ ಅವರು, “ಶಿಕ್ಷಕ ಓರ್ವ ಕಲಿಕಾರ್ಥಿ. ಆತ ನಿರಂತರವಾಗಿ ಕಲಿಯುತ್ತಿರುತ್ತಾನೆ. ಶಿಕ್ಷಕರಿಗೆ ಚೈತನ್ಯ ತುಂಬುವ ಕೆಲಸ ತರಬೇತಿ ಕಾರ್ಯಾಗಾರಗಳು ಮಾಡುತ್ತವೆ. ತರಬೇತಿ ಪಡೆದು ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳೋಣ” ಎಂದರು.