Dharwad, June 21: “Yoga is a great tool for human health and all-round development. The goal of yoga is not just to fix the body. It helps in purifying all three elements including mind, body and soul. Yoga is not just physical exercise. Yoga is not just an asana. It makes the mind calm and stable. It removes stress and increases concentration. Therefore, we need to adopt yoga in our daily lives and move forward to build a strong India,” said B.M. Mundinamani, retired principal of Sri Harbhata P.U. College, Kundgol.
He spoke as the chief spokesperson of the World Yoga Day program held herein Rashtrotthana Vidya Kendra – Dharwad, Neeralkatti. Principal Dr. Anita Rai taught the Sankalpa at the program. Yoga teacher Sri Atmanand conducted a group yoga asana. Narasimha Belgaonwakar sang the Yoga Geeta.
ಧಾರವಾಡ, ಜೂ. 21: “ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲಾ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮವಲ್ಲ. ಯೋಗ ಎಂದರೆ ಆಸನವಲ್ಲ. ಅದು ಮನಸ್ಸನ್ನು ಶಾಂತ ಮತ್ತು ಸ್ಥಿರವಾಗಿಸುತ್ತದೆ. ಒತ್ತಡವನ್ನು ತೆಗೆದು ಹಾಕುತ್ತದೆ ಮತ್ತು ಏಕಾಗೃತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಯೋಗವನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಂಡು ಸದೃಢ ಭಾರತವನ್ನು ಕಟ್ಟಲು ಮುಂದಾಗಬೇಕಾಗಿದೆ” ಎಂದು ಕುಂದಗೋಳದ ಶ್ರೀ ಹರಭಟ ಪಿ.ಯು. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಎಂ.ಮುಂದಿನಮನಿ ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಅನಿತಾ ರೈಯವರು ಸಂಕಲ್ಪವನ್ನು ಬೋಧಿಸಿದರು. ಯೋಗ ಶಿಕ್ಷಕರಾದ ಶ್ರೀ ಆತ್ಮಾನಂದ ಇವರು ಸಾಮೂಹಿಕ ಯೋಗಾಸನವನ್ನು ನಡೆಸಿಕೊಟ್ಟರು. ನರಸಿಂಹ ಬೆಳಗಾಂವಕರ್ ಅವರು ಯೋಗ ಗೀತೆಯನ್ನು ಹಾಡಿದರು.


