Dharwad, June 27: “Today is Hindu Samrajyotsava Day. It is the coronation day of Chhatrapati Shivaji Maharaj. Shivaji Maharaj had immense respect and devotion for his religion and nationalism even in his childhood. That is why he built a strong Hindu empire later. Today, not only India but the entire world needs the shelter of Hindutva. If the country wants to become a world teacher, we need to follow Shivaji’s ideals and instil in ourselves the feeling that we are all one, we are all brothers, we are all Hindus,” said lecturer Sri Sudhindra Bindagi. He spoke as the spokesperson for the Hindu Samrajyotsava held herein Rashtrotthana Vidya Kendra – Dharwad, Neeralkatti.

ಧಾರವಾಡ, ಜೂ. 27: “ಇಂದು ಹಿಂದೂ ಸಾಮ್ರಾಜ್ಯೋತ್ಸವ ದಿನ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನ. ಶಿವಾಜಿ ಮಹಾರಾಜರು ಚಿಕ್ಕಂದಿನಲ್ಲಿಯೇ ತನ್ನ ಧರ್ಮ, ರಾಷ್ಟ್ರೀಯತೆಯ ಬಗ್ಗೆ ಅಪಾರ ಗೌರವ-ಶ್ರದ್ಧೆಯನ್ನು ಹೊಂದಿದ್ದರು. ಅದರಿಂದಾಗಿಯೇ ಮುಂದೆ ಬಲಿಷ್ಠ ಹಿಂದೂ ಸಾಮ್ರಾಜ್ಯವನ್ನು ಕಟ್ಟಿದರು. ಇಂದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಹಿಂದುತ್ವದ ಆಶ್ರಯ ಬೇಕಾಗಿದೆ. ದೇಶ ವಿಶ್ವಗುರುವಾಗಬೇಕಾದರೆ ಶಿವಾಜಿಯ ಆದರ್ಶಗಳನ್ನು ಪಾಲಿಸುವುದರೊಂದಿಗೆ ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು, ನಾವೆಲ್ಲರೂ ಹಿಂದೂ ಎಂಬ ಭಾವನೆ ನಮ್ಮಲ್ಲಿ ಬೇರೂರಬೇಕಾಗಿದೆ” ಎಂದು ಉಪನ್ಯಾಸಕರಾದ ಶ್ರೀ ಸುಧೀಂದ್ರ ಬಿಂದಗಿಯವರು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವದ ವಕ್ತಾರರಾಗಿ ಅವರು ಮಾತನಾಡಿದರು.