Dharwad, Oct. 2: “Mahatma Gandhiji was a champion of truth and non-violence. His efforts were not limited merely to India’s independence; he played a pivotal role in eradicating many social evils prevalent at the time. Lal Bahadur Shastri was inspired by Gandhiji, and under his leadership, the country charted a path of development despite facing numerous challenges,” observed Sri Anand Kulkarni, a member of Vidya Bharati, Dharwad.

  • He was speaking as the keynote speaker at the joint celebration of the birth anniversaries of Gandhiji and Lal Bahadur Shastri, as well as the valedictory ceremony of ‘Swadeshi Saptaha’ (Swadeshi Week), held at Rashtrotthana Vidya Kendra – Dharwad, Neeralakatti.
  • “One must have accumulated immense merit over thousands of years to be born in a sacred land like India. Let us resolve to repay our debt to the motherland by incorporating the ideals and philosophies of great souls like Gandhiji and Shastriji into our own lives,” he urged.
  • During the event, a student named Saisharan presented the report on ‘Swadeshi Saptaha’.


ಧಾರವಾಡ, ಅ. 2: “ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮುಂದಾಳು. ಅವರ ಪ್ರಯತ್ನಗಳು ಭಾರತದ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಆ ಸಮಯದಲ್ಲಿ ಇದ್ದ ಅನೇಕ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವಲ್ಲಿ ಅವರ ಪ್ರಯತ್ನ ಅತ್ಯಂತ ಮಹತ್ವದ್ದಾಗಿತ್ತು. ಗಾಂಧೀಜಿಯವರಿಂದ ಪ್ರೇರಿತರಾದವರು ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ನಾಯಕತ್ವದಲ್ಲಿ ದೇಶ ಅನೇಕ ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಹಾದಿಯನ್ನು ಹಿಡಿಯಿತು” ಎಂದು ವಿದ್ಯಾ ಭಾರತಿ ಧಾರವಾಡದ ಸದಸ್ಯರಾದ ಶ್ರೀ ಆನಂದ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು. 

  • ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಸ್ವದೇಶಿ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
  • “ಭಾರತದಂತಹ ಪುಣ್ಯ ಭೂಮಿಯಲ್ಲಿ ಹುಟ್ಟಲು ಸಾವಿರಾರು ವರ್ಷಗಳ ಪುಣ್ಯ ಮಾಡಿರಬೇಕು. ಇಲ್ಲಿ ಹುಟ್ಟಿರುವ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರಂತಹ ಮಹಾನ್ ಚೇತನರ ಆದರ್ಶ ಮತ್ತು ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಾಯ್ನೆಲದ ಋಣವನ್ನು ತೀರಿಸುವ ಪಣತೊಡೋಣ” ಎಂದು ಕರೆ ನೀಡಿದರು.
  • ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಾಯಿಶರಣ ಸ್ವದೇಶಿ ಸಪ್ತಾಹದ ವರದಿಯನ್ನು ವಾಚಿಸಿದರು.