Dharwad, Aug. 25: The birth anniversary of Rajguru was celebrated herein Rashtrotthana Vidya Kendra – Dharwad, Neeralkatta.Student, Manjunath Polashi shared the information that, “Rajguru is remembered for his participation in the Kakori conspiracy in 1925. He was the spark of revolution who sacrificed his life to free the motherland from the shackles of the British. His courage, adventure, and brave struggles still inspire patriotism among the people.”
ಧಾರವಾಡ, ಆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಕ್ರಾಂತಿಕಾರಿ ರಾಜಗುರು ಇವರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿ ಮಂಜುನಾಥ ಪೊಳಾಶಿ, “1925 ರಲ್ಲಿ ನಡೆದ ಕಾಕೋರಿ ಪಿತೂರಿಯಲ್ಲಿ ಭಾಗವಹಿಸಿದ್ದಕ್ಕಾಗಿ ರಾಜಗುರುವನ್ನು ಸ್ಮರಿಸಲಾಗುತ್ತದೆ. ತಾಯಿನಾಡನ್ನು ಬ್ರಿಟಿಷರ ಸಂಕೋಲೆಯಿಂದ ಮುಕ್ತಗೊಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಕ್ರಾಂತಿ ಕಿಡಿ. ಅವರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟಗಳು ಇಂದಿಗೂ ಜನರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕುತ್ತದೆ” ಎನ್ನುವ ಮಾಹಿತಿಯನ್ನು ಹಂಚಿಕೊಂಡನು.


