Dharwad, Dec. 21-22: A teachers’ orientation Program – 4 was organized herein Rashtrotthana Vidya Kendra – Dharwad, Neeralkatti. The Principal of the school, Dr. Anita Rai, while delivering the introductory remarks, opined, “Rashtrotthana School is a school that teaches children morals and values. Therefore, training workshops will be beneficial for teachers to improve the quality of teachers.” Sri Shivaraj N, Principal of Rashtrotthana Vidya Kendra- Mysuru, who arrived as the inaugurator, said, “Training workshops do the job of invigorating teachers. We should make good use of the training and make both the Rashtroththan Schools in the heart of Dharwad a model school.”
ಧಾರವಾಡ, ಡಿ. 21-22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಡಾ. ಅನಿತಾ ರೈ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, “ರಾಷ್ಟ್ರೋತ್ಥಾನ ಶಾಲೆ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿಕೊಡುವ ಶಾಲೆಯಾಗಿದೆ. ಹೀಗಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ತರಬೇತಿ ಕಾರ್ಯಾಗಾರಗಳು ಶಿಕ್ಷಕರಿಗೆ ಪ್ರಯೋಜನಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು. ಉದ್ಘಾಟಕರಾಗಿ ಆಗಮಿಸಿದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಮೈಸೂರಿನ ಪ್ರಧಾನಾಚಾರ್ಯರಾದ ಶ್ರೀ ಶಿವರಾಜ ಎನ್ ಅವರು, “ಶಿಕ್ಷಕರಿಗೆ ಚೈತನ್ಯ ತುಂಬುವ ಕೆಲಸವನ್ನು ತರಬೇತಿ ಕಾರ್ಯಾಗಾರಗಳು ಮಾಡುತ್ತವೆ. ತರಬೇತಿಯನ್ನು ಸದುಪಯೋಗ ಮಾಡಿಕೊಂಡು ಧಾರವಾಡದ ಹೃದಯ ಭಾಗದಲ್ಲಿರುವ ಎರಡೂ ರಾಷ್ಟ್ರೋತ್ಥಾನ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸುವ ಪಣತೊಡಬೇಕು” ಎಂದರು.




