Teacher Rejuvenation Workshop – 3 in RVK – Dharwad

Dharwad, Oct 14-15: The two-day Teacher Rejuvenation Workshop herein Rashtrotthana Vidya Kendra – Dharwad, Neeralakatti was inaugurated with the lighting of a lamp. School principal Smt. Dr. Anita Rai, while inaugurating the workshop and giving introductory remarks, expressed the opinion, “Rashtrotthana School is a school that teaches culture and values to children. Thus, training workshops will be beneficial for teachers to improve the quality of teachers.”
Smt. Neelakantheswari, principal of Rashtrotthana Vidya Kendra – Kerur, who was present during the inauguration, said, “A teacher is a learner. He is constantly learning. Training workshops do the job of energizing teachers.”
First day:
Session -1: Sardar Vallabhbhai Patel- Sri Kiran Ram, the coordinator of the state project of the Yuva Brigade, said, “Sardar used to write the slogan ‘Unity is strength’ on the wall of his house when he was studying in the third grade and read it every day. The same sentence inspired him to unite the whole of India.”
Session-2: Collaborative approach – The Principal of Rashtrotthana Vidya Kendra – Dharwad Smt. Anita Rai said “In cooperative learning process students’ study in groups to enhance their learning outcomes. This will help in understanding new concepts,” he said.
Session-3: Competency based approach – Dr. Sivaprasad, Professor of IIT, Dharwad. opined that “Earlier education was imparted only through Guru. But in modern education there are many avenues of knowledge. Today’s scientific technology encourages children’s learning”.
Session-4: Technology integration – Rashtrotthana Vidya Kendra – Dharwad computer teacher Smt. Nagamma explained the topic of Basic Computer, Google Form Quiz Create, Survey Create and discussed with the campers whether there is a need for technology adoption in current education or not.
Session-5: Open dialogue-the culture of Rashtrotthana Sri Ashok Sonakar, a former member of Rashtrotthana, discusses the difference between being an employee and an activist and how to move from commitment to maturity.
Session-6: Open Dialogue Sri Gururaj Agadi, Correspondent of Rashtrotthana Vidya Kendra – Sattur, introduced the Rashtrotthana Parishad and its projects and discussed the role of the teacher in fulfilling the mission and goals of Rashtrotthana.
Second Day:
Session-1: Professionalism – Retired Brigadier, Dr. Sudhindra Itnala said, “Those who work in the field of teaching have a special respect in the society. Everyone in the teaching profession should imbibe the quality of professionalism. If the given work is handled efficiently, opportunities will come.”
Session-2: Lesson Planning: Veda Purohita, a retired Kendriya Vidyalaya teacher explained the steps of lesson planning, saying, “A lesson plan is a teacher’s guide for conducting a particular lesson. It is an essential part of teaching. A lesson plan helps organize the activities, materials and assessments required to meet the learning objectives.”
Session – 3: Competency based assessment – Smt. Neelakantheswari, Principal of Rashtrotthana Vidya Kendra – Kerur, explained in detail about the topic of preparation of work paper, blue map preparation and question paper preparation.
Session-4: Lesson Plan Writing The teachers wrote a lesson plan for a selected lesson in the teaching topic.
Session-5: Presentation of lesson plan A lesson plan already written was presented by one of the subject wise groups. Scholastic teachers: For the teachers of this department, sessions were conducted by expert teachers on Edumerge orientation, communicative skills, computer skills-basic.
Concluding Program: Smt. Neelakantheswari, Principal of Rashtrotthana Vidya Kendra – Kerur, who was the spokesperson of the concluding program, said, “Teachers should make good use of the knowledge acquired in the two-day teacher training workshop.” 72 teachers from Rashtrotthana Vidya Kendra – Kerur, Sattur and Dharwad participated in the workshop.

ಧಾರವಾಡ, ಅಕ್ಟೋಬರ್ 14-15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ದಲ್ಲಿ ಎರಡು ದಿನಗಳ ಕಾಲ ನಡೆದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ದೀಪ ಪ್ರಜ್ವಲನದೊಂದಿಗೆ ಪ್ರಾರಂಭಿಸಲಾಯಿತು. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಡಾ. ಅನಿತಾ ರೈ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, “ರಾಷ್ಟ್ರೋತ್ಥಾನ ಶಾಲೆ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿಕೊಡುವ ಶಾಲೆಯಾಗಿದೆ. ಹೀಗಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ತರಬೇತಿ ಕಾರ್ಯಾಗಾರಗಳು ಶಿಕ್ಷಕರಿಗೆ ಪ್ರಯೋಜನಕಾರಿಯಾಗಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉದ್ಘಾಟನೆಯ ಸಮಯದಲ್ಲಿ ಉಪಸ್ಥಿತರಿದ್ದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರಿನ ಪ್ರಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಇವರು, “ಶಿಕ್ಷಕ ಓರ್ವ ಕಲಿಕಾರ್ಥಿ. ಆತ ನಿರಂತರವಾಗಿ ಕಲಿಯುತ್ತಿರುತ್ತಾನೆ. ಶಿಕ್ಷಕರಿಗೆ ಚೈತನ್ಯ ತುಂಬುವ ಕೆಲಸ ತರಬೇತಿ ಕಾರ್ಯಾಗಾರಗಳು ಮಾಡುತ್ತವೆ” ಎಂದರು.
ಮೊದಲ ದಿನ:
ಅವಧಿ – 1: ಸರ್ದಾರ್ ವಲ್ಲಭಭಾಯಿ ಪಟೇಲ್ ಯುವ ಬ್ರಿಗೇಡ್‍ನ ರಾಜ್ಯ ಪ್ರಕಲ್ಪದ ಸಂಚಾಲಕರಾದ ಶ್ರೀ ಕಿರಣ ರಾಮ್ ಅವರು, “ಸರ್ದಾರರು ಮೂರನೇ ತರಗತಿಯಲ್ಲಿ ಓದುತ್ತಿರುವಾಗಲೇ ಮನೆಯ ಗೋಡೆಯ ಮೇಲೆ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಘೋಷವಾಕ್ಯವನ್ನು ಬರೆದು ಪ್ರತಿನಿತ್ಯ ಓದುತ್ತಿದ್ದರು. ಅದೇ ವಾಕ್ಯವು ಅವರಿಗೆ ಇಡೀ ಭಾರತವನ್ನು ಒಗ್ಗೂಡಿಸಲು ಸ್ಪೂರ್ತಿಯಾಯಿತು” ಎಂದರು.
ಅವಧಿ-2: Collaborative Approach – ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡದ ಪ್ರಾಚಾರ್ಯರಾದ ಡಾ. ಅನಿತಾ ರೈ ಇವರು “ಸಹಕಾರಿ ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಫಲಿತಾಂಶವನ್ನು ಹೆಚ್ಚಿಸಲು ಗುಂಪುಗಳಲ್ಲಿ ಅಧ್ಯಯನ ಮಾಡುತ್ತಾರೆ. ಇದರಿಂದ ಹೊಸ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ” ಎಂದರು.
ಅವಧಿ-3: Competency based Approach – ಧಾರವಾಡದ ಐಐಟಿಯ ಪ್ರೊಫೆಸರ್ ಆದ ಡಾ. ಶಿವಪ್ರಸಾದ್ ಇವರು “ಹಿಂದೆ ಗುರುವಿನ ಮೂಲಕ ಮಾತ್ರ ಶಿಕ್ಷಣ ಪ್ರಸಾರ ಆಗುತ್ತಿತ್ತು. ಆದರೆ ಆಧುನಿಕ ಶಿಕ್ಷಣದಲ್ಲಿ ಜ್ಞಾನದ ಮಾರ್ಗಗಳು ಹಲವಾರು. ಇಂದಿನ ವೈಜ್ಞಾನಿಕ ತಂತ್ರಜ್ಞಾನವು ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಅವಧಿ-4: Technology Integration – ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡದ ಕಂಪ್ಯೂಟರ್ ಶಿಕ್ಷಕಿ ಕು. ನಾಗಮ್ಮ ಇವರು, ಬೇಸಿಕ್ ಕಂಪ್ಯೂಟರ್, ಗೂಗಲ್ ಫಾರ್ಮಲ್ಲಿ ಕ್ವಿಜ್ ಕ್ರಿಯೇಟ್, ಸರ್ವೆ ಕ್ರಿಯೇಟ್ ವಿಷಯವನ್ನು ತಿಳಿಸಿ, ಪ್ರಸ್ತುತ ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯಕತೆ ಇದೆಯೋ ಅಥವಾ ಇಲ್ಲವೋ ಎಂಬ ವಿಷಯದ ಕುರಿತು ಶಿಬಿರಾರ್ಥಿಗಳೊಂದಿಗೆ ಚರ್ಚಿಸಿ ವಿಷಯವನ್ನು ಮಂಡಿಸಿದರು.
ಅವಧಿ-5: ಮುಕ್ತ ಸಂವಾದ-ರಾಷ್ಟ್ರೋತ್ಥಾನ ಸಂಸ್ಕೃತಿ. ರಾಷ್ಟ್ರೋತ್ಥಾನ ಪರಿಷತ್ತಿನ ನಿಕಟಪೂರ್ವ ಸದಸ್ಯರಾದ ಶ್ರೀ ಅಶೋಕ ಸೋನಕರ ಇವರು ಉದ್ಯೋಗಿ ಮತ್ತು ಕಾರ್ಯಕರ್ತ ಇವೆರಡರ ನಡುವಿನ ವ್ಯತ್ಯಾಸವನ್ನು ಚರ್ಚಿಸಿ ಬದ್ಧತೆಯಿಂದ ಪ್ರಬುದ್ಧತೆಯೆಡೆಗೆ ಸಾಗುವುದು ಹೇಗೆ? ಎಂಬುದನ್ನು ವಿವರಿಸಿದರು.
ಅವಧಿ-6: ಮುಕ್ತ ಸಂವಾದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸತ್ತೂರಿನ ಕರೆಸ್ಪಾಂಡೆಂಟ್ ಆದ ಶ್ರೀ ಗುರುರಾಜ ಅಗಡಿ ಇವರು ರಾಷ್ಟ್ರೋತ್ಥಾನ ಪರಿಷತ್ತು ಮತ್ತು ಪ್ರಕಲ್ಪಗಳನ್ನು ಪರಿಚಯಿಸಿ, ರಾಷ್ಟ್ರೋತ್ಥಾನದ ಧ್ಯೇಯ ಮತ್ತು ಗುರಿಗಳನ್ನು ಈಡೇರಿಸುವಲ್ಲಿ ಶಿಕ್ಷಕನ ಪಾತ್ರ ಎಂಬ ವಿಷಯವನ್ನು ಚರ್ಚಿಸಿದರು.
ಎರಡನೇ ದಿನ:
ಅವಧಿ-1: Professionalism – ನಿವೃತ್ತ ಬ್ರಿಗೇಡಿಯರ ಡಾ. ಸುಧೀಂದ್ರ ಇಟ್ನಾಳ ಇವರು, “ಶಿಕ್ಷಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ. ಶಿಕ್ಷಕ ವೃತ್ತಿಯಲ್ಲಿರುವ ಪ್ರತಿಯೊಬ್ಬರು ವೃತ್ತಿಪರತೆ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ” ಎಂದರು.
ಅವಧಿ-2: ಪಾಠ ಯೋಜನೆ: ಕೇಂದ್ರೀಯ ವಿದ್ಯಾಲಯದ ನಿವೃತ್ತ ಶಿಕ್ಷಕಿ ವೇದಾ ಪುರೋಹಿತ ಇವರು, “ಪಾಠಯೋಜನೆಯು ನಿರ್ದಿಷ್ಟ ಪಾಠವನ್ನು ನಡೆಸಲು ಶಿಕ್ಷಕರ ಮಾರ್ಗದರ್ಶಿಯಾಗಿದೆ. ಅದು ಬೋಧನೆಯ ಅತ್ಯಗತ್ಯ ಭಾಗವಾಗಿದೆ. ಪಾಠ ಯೋಜನೆಯು ಕಲಿಕೆಯ ಗುರಿಗಳನ್ನು ಪೂರೈಸಲು ಅಗತ್ಯವಿರುವ ಚಟುವಟಿಕೆಗಳು, ಸಾಮಗ್ರಿಗಳು ಮತ್ತು ಮೌಲ್ಯಮಾಪನಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ” ಎಂದು ಹೇಳಿ, ಪಾಠ ಯೋಜನೆಯ ಹಂತಗಳನ್ನು ವಿವರಿಸಿದರು.
ಅವಧಿ-3: Competency based Assessment – ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರಿನ ಪ್ರಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಇವರು ಕಾರ್ಯಪ್ರತಿ ಸಿದ್ಧಪಡಿಸುವಿಕೆ, ನೀಲ ನಕ್ಷೆ ತಯಾರಿಕೆ ಹಾಗೂ ಪ್ರಶ್ನೆ ಪತ್ರಿಕೆ ರಚನೆ ಎಂಬ ವಿಷಯದ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಅವಧಿ-4: ಪಾಠಯೋಜನೆಯ ಬರವಣಿಗೆ. ಬೋಧಿಸುವ ವಿಷಯದಲ್ಲಿ ಆಯ್ದ ಪಾಠವೊಂದಕ್ಕೆ ಪಾಠ ಯೋಜನೆಯನ್ನು ಬರೆದರು.
ಅವಧಿ-5: ಪಾಠ ಯೋಜನೆಯ ಪ್ರಸ್ತುತಿ. ಈಗಾಗಲೇ ಬರೆದಿರುವ ಪಾಠ ಯೋಜನೆಯನ್ನು ವಿಷಯವಾರು ಗುಂಪಿನಿಂದ ಒಬ್ಬರು ಪ್ರಸ್ತುತಪಡಿಸಿದರು.
Scholastic teachers: ಈ ವಿಭಾಗದ ಶಿಕ್ಷಕರಿಗೆ Edumerge orientation, communicative skills, computer skills- basic ಈ ವಿಷಯದ ಕುರಿತಾಗಿ ನುರಿತ ಶಿಕ್ಷಕರಿಂದ ಅವಧಿಗಳು ನಡೆದವು.
ಸಮಾರೋಪ: ಸಮಾರೋಪ ಕಾರ್ಯಕ್ರಮದ ವಕ್ತಾರರಾಗಿದ್ದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರಿನ ಪ್ರಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಇವರು, “ಶಿಕ್ಷಕರು ಎರಡು ದಿನಗಳ ಕಾಲ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪಡೆದುಕೊಂಡ ಜ್ಞಾನವನ್ನು ಸದುಪಯೋಗ ಪಡೆದುಕೊಳ್ಳಬೇಕು” ಎಂದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರು, ಸತ್ತೂರು ಹಾಗೂ ಧಾರವಾಡದ 72 ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Scroll to Top