Dharawad, October 2: “Mahatma Gandhi was a prominent advocate for truth and non-violence. His contributions extended beyond the quest for India’s independence, playing a crucial role in addressing various social injustices of his era. Lal Bahadur Shastri drew inspiration from Gandhi’s principles. Under his guidance, the nation embarked on a path of development, overcoming numerous challenges.” This perspective was shared by Thinker and Author Sri Harsha Dambal, who served as the chief speaker at the Gandhiji and Lal Bahadur Shastri Jayanti and closing ceremony of the Swadeshi Saptaha, held herein Rashtrotthana Vidya Kendra – Dharwad, Niralakatti. “To be born in a sacred land such as India signifies that one has accumulated countless years of virtue. It is imperative for us to nurture the character of repaying our nation’s debt by embracing the ideals and philosophies of esteemed figures like Gandhiji and Shastriji, who hailed from this land.” said Sri Harsha Dambal. Cultural programs like song singing and speech were held by the children in the program. Principal Dr. Anita Rai delivered the presidential address. Ku. Trishara Nanjawade gave a report on Swadeshi Saptha.
ಧಾರವಾಡ, ಅಕ್ಟೋಬರ್ 2: “ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮುಂದಾಳು. ಅವರ ಪ್ರಯತ್ನಗಳು ಭಾರತದ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಆ ಸಮಯದಲ್ಲಿ ಇದ್ದ ಅನೇಕ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವಲ್ಲಿ ಅವರ ಪ್ರಯತ್ನ ಅತ್ಯಂತ ಮಹತ್ತ್ವದ್ದಾಗಿತ್ತು. ಗಾಂಧೀಜಿಯವರಿಂದ ಪ್ರೇರಿತರಾದವರು ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ನಾಯಕತ್ವದಲ್ಲಿ ದೇಶ ಅನೇಕ ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಹಾದಿಯನ್ನು ಹಿಡಿಯಿತು” ಎಂದು ಸಾಹಿತಿ, ಚಿಂತಕ ಶ್ರೀ ಹರ್ಷ ಡಂಬಳ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಸ್ವದೇಶೀ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. “ಭಾರತದಂತಹ ಪುಣ್ಯ ಭೂಮಿಯಲ್ಲಿ ಹುಟ್ಟಲು ಸಾವಿರಾರು ವರ್ಷಗಳ ಪುಣ್ಯ ಮಾಡಿರಬೇಕು. ಇಲ್ಲಿ ಹುಟ್ಟಿರುವ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರಂತಹ ಮಹಾನ್ ಚೇತನರ ಆದರ್ಶ ಮತ್ತು ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಋಣವನ್ನು ತೀರಿಸುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಗೀತ ಗಾಯನ, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಾಚಾರ್ಯರಾದ ಡಾ. ಅನಿತಾ ರೈ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕು. ತ್ರಿಶಾರ ನಂಜವಾಡೆ ಸ್ವದೇಶಿ ಸಪ್ತಾಹದ ವರದಿಯನ್ನು ನೀಡಿದನು.