Karnataka Rajyotsava Celebration in RVK – Dharwad

Dharwad, Nov. 6: “Karnataka Rajyotsava is a meaningful celebration to inform about Kannada land, language, land and culture. Nadahabba is a day to create unity among Kannadigas. It reminds us that we are all part of one community regardless of our differences,” said Dr. Sangamnath Lokapura opined. He spoke as the spokesperson of the Karnataka Rajyotsava program held herein Rashtrotthana Vidya Kendra – Dharwad, Neeralakatti.Karnataka Rajyotsava was celebrated herein Rashtrotthana Vidya Kendra – Dharwad, Neeralakatti.Famous literature Dr. Sangamesh Lokapur was the chief guest. “Kannada language is one of the classical languages. Kannadigas should make this mother tongue their heart language and learn different languages to know the world in modern competitive age.” Thus they said. Cultural programs like group singing, speech, group dance etc. were performed by the children in the program.

ಧಾರವಾಡ, ನ. 6: “ಕರ್ನಾಟಕ ರಾಜ್ಯೋತ್ಸವ ಕನ್ನಡ ನಾಡು, ನುಡಿ, ನೆಲ, ಸಂಸ್ಕೃತಿ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಆಚರಣೆಯಾಗಿದೆ. ನಾಡಹಬ್ಬವು ಕನ್ನಡಿಗರಲ್ಲಿ ಏಕತೆಯನ್ನು ಮೂಡಿಸುವ ದಿನವಾಗಿದೆ. ನಮ್ಮಲ್ಲಿರುವ ಭಿನ್ನಾಪ್ರಾಯಗಳನ್ನು ಲೆಕ್ಕಿಸದೆ ನಾವೆಲ್ಲರೂ ಒಂದೇ ಸಮುದಾಯದ ಭಾಗವಾಗಿದ್ದೇವೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ” ಎಂದು ಖ್ಯಾತ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಇವರು ಅಭಿಪ್ರಾಯ ಪಟ್ಟರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದರು.ರಾಷ್ಟ್ರೋತ್ಥಾನ ವಿದ್ಯಾಕೆಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಖ್ಯಾತ ಸಾಹಿತಿ ಡಾ. ಸಂಗಮೇಶ್ ಲೋಕಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳು, “ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಗಳಲ್ಲೊಂದು. ಈ ತಾಯ್ನುಡಿಯನ್ನು ಕನ್ನಡಿಗರು ತಮ್ಮ ಹೃದಯಭಾಷೆಯನ್ನಾಗಿ ಮಾಡಿಕೊಂಡು ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಪ್ರಪಂಚವನ್ನು ಅರಿಯಲು ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು” ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಮೂಹಿಕ ಗಾಯನ, ಭಾಷಣ, ಸಾಮೂಹಿಕ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Scroll to Top