Dharwad, Sept 16: “Hindi is a simple and gentlemanly language. It is a must-learn language if you want to travel to any part of India. So let us all learn and teach this language,” appealed Hindi teacher Smt. Sanjota. She spoke as a speaker at the closing program of Hindi Week herein Rashtrotthana Vidya Kendra – Dharwad, Niralakatti.Programs like introduction of great Hindi poets, recitation of original poetry, monologue, Doha recitation, storytelling were conducted by the students for 6 days.
ಧಾರವಾಡ, ಸಪ್ಟೆಂಬರ್ 16: “ಹಿಂದಿ ಸರಳ ಮತ್ತು ಸಜ್ಜನ ಭಾಷೆ. ಭಾರತ ದೇಶದ ಯಾವುದೇ ಭಾಗಕ್ಕೆ ಸಂಚರಿಸಬೇಕಾದರೆ ಅತ್ಯವಶ್ಯವಾಗಿ ಕಲಿಯಲೇ ಬೇಕಾದ ಭಾಷೆ. ಹೀಗಾಗಿ ನಾವೆಲ್ಲ ಈ ಭಾಷೆಯನ್ನು ಕಲಿಯೋಣ ಹಾಗೂ ಕಲಿಸೋಣ” ಎಂದು ಹಿಂದಿ ಶಿಕ್ಷಕಿ ಶ್ರೀಮತಿ ಸಂಜೋತಾ ಕರೆ ನೀಡಿದರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಹಿಂದಿ ಸಪ್ತಾಹದ ಸಮಾರೋಪ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ 6 ದಿನಗಳ ಕಾಲ ಶ್ರೇಷ್ಠ ಹಿಂದಿ ಕವಿಗಳ ಪರಿಚಯ, ಸ್ವರಚಿತ ಕವಿತಾ ವಾಚನ, ಏಕಪಾತ್ರಾಭಿನಯ, ದೋಹಾ ಪಠಣ, ಕಥಾ ಕಥನ ಮುಂತಾದ ಕಾರ್ಯಕ್ರಮಗಳು ಜರುಗಿದವು.