Dharwad, Dec. 1: “The teaching of Bhagavad Gita is an episode that comes in the Bhishma Parva of the Mahabharata. It is not a teaching that Lord Krishna taught only to Arjuna. It is a teaching that he taught to the entire human race. To understand Hinduism, one should read Bhagavad Gita. If one studies Bhagavad Gita, there is no need to study other scriptures. Because Bhagavad Gita is the right path to achieve human perfection and salvation,” said Sri Anand Patil, a mathematics teacher. He spoke as the spokesperson for the Gita Jayanti program held herein Rashtrotthana Vidya Kendra – Dharwad, Neeralkatti. Gita Saptaha was organized in RVK – Dharwad. The students spoke on the importance of Bhagavad Gita. And recited the eleventh chapter of Bhagavad Gita.

ಧಾರವಾಡ, ಡಿ. 1: “ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವ ಪ್ರಸಂಗವೇ ಭಗವದ್ಗೀತೆ ಬೋಧನೆ. ಅದು ಶ್ರೀಕೃಷ್ಣನು ಕೇವಲ ಅರ್ಜುನನಿಗೆ ಬೋಧಿಸಿದ ಉಪದೇಶವಲ್ಲ. ಇಡೀ ಮಾನವ ಕುಲಕ್ಕೆ ಬೋಧಿಸಿದ ಉಪದೇಶವಾಗಿದೆ. ಹಿಂದೂ ಧರ್ಮವನ್ನು ಅರ್ಥೈಸಿಕೊಳ್ಳಬೇಕಾದರೆ ಭಗವದ್ಗೀತೆಯನ್ನು ಓದಬೇಕು. ಭಗವದ್ಗೀತೆ ಅಧ್ಯಯನ ಮಾಡಿದರೆ ಉಳಿದ ಶಾಸ್ತ್ರಗಳ ಅಧ್ಯಯನ ಬೇಕಿಲ್ಲ. ಏಕೆಂದರೆ ಭಗವದ್ಗೀತೆ ಎನ್ನುವುದು ಮಾನವ ಪರಿಪೂರ್ಣತೆ ಸಾಧಿಸಲು ಹಾಗೂ ಮೋಕ್ಷ ಗಳಿಸಲು ಇರುವ ಸನ್ಮಾರ್ಗವಾಗಿದೆ” ಎಂದು ಗಣಿತ ಶಿಕ್ಷಕರಾದ ಶ್ರೀ ಆನಂದ ಪಾಟೀಲ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದ ವಕ್ತಾರರಾಗಿ ಅವರು ಮಾತನಾಡಿದರು. ರಾವಿಕೆ – ಧಾರವಾಡದಲ್ಲಿ ಗೀತಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಭಗವದ್ಗೀತೆಯ ಮಹತ್ವದ ಕುರಿತು ಮಾತನಾಡಿದರು. ಹಾಗೂ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಪಾರಾಯಣ ಮಾಡಿದರು.