Dharwad, Aug. 15: “Independence Day is a day to remember the sacrifices and sacrifices of freedom fighters. What are our responsibilities on this auspicious day? We also need to resolve to contribute something to the country by understanding this. Let us all work together to eliminate the problems in society,” said Suresh Yaragoppa, a retired soldier of the Indian Army. He was speaking as the guest of honour at the 80th Independence Day celebration program held at Rashtrotthana Vidya Kendra – Dharwad, Neeralkatti. Cultural programs such as Lejim, Mallagamba, patriotic songs, dance, speeches, etc. were held during the program.

 

ಧಾರವಾಡ, ಆ. 15: “ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನವಾಗಿದೆ. ಈ ಶುಭದಿನದಂದು ನಮ್ಮ ಜವಾಬ್ದಾರಿಗಳೇನು? ಎಂಬುದನ್ನು ಅರ್ಥೈಸಿಕೊಂಡು ದೇಶಕ್ಕೆ ನಾವೂ ಸಹ ಏನಾದರೂ ಕೊಡುಗೆ ನೀಡಲು ಸಂಕಲ್ಪ ಮಾಡಬೇಕಾಗಿದೆ. ಸಮಾಜದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು ನಾವೆಲ್ಲರೂ ಒಮ್ಮತದಿಂದ ಪಣತೊಡೋಣ” ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಸುರೇಶ ಯರಗೊಪ್ಪ ಇವರು ಅಭಿಪ್ರಾಯಪಟ್ಟರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೇಜಿಮ್, ಮಲ್ಲಗಂಬ, ದೇಶಭಕ್ತಿ ಗೀತೆ ಗಾಯನ, ನೃತ್ಯ, ಭಾಷಣ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.