Dharwad, Aug. 6: The three-day ‘Utsava 2026-27’ was inaugurated at Rashtrotthana Vidya Kendra – Dharwad, Neeralkatti. Sri Rama Bhat, a Sanskrit scholar who arrived as the inaugurator, opined, “The festival organized at Rashtrotthana is not just a festival. It is a festival of knowledge. It is a festival organized for those who are thirsty for knowledge. Students should participate in such a festival with joy and develop their personality.” Principal Dr. Anita Rai, in her introductory remarks, said, “Participating in such a festival will help children bring out their hidden talents. Students should make good use of this festival of talent.”
ಧಾರವಾಡ, ಆ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ʼಉತ್ಸವ 2026-27ʼ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಆಗಮಿಸಿದ ಸಂಸ್ಕೃತ ಪಂಡಿತರಾದ ಶ್ರೀ ರಾಮ ಭಟ್ ಅವರು, “ರಾಷ್ಟ್ರೋತ್ಥಾನದಲ್ಲಿ ಹಮ್ಮಿಕೊಂಡ ಉತ್ಸವ ಅದು ಕೇವಲ ಉತ್ಸವವಲ್ಲ. ಅದು ಜ್ಞಾನೋತ್ಸವ. ಜ್ಞಾನ ದಾಹ ಇರುವವರಿಗಾಗಿ ಹಮ್ಮಿಕೊಂಡ ಉತ್ಸವವಾಗಿದೆ. ವಿದ್ಯಾರ್ಥಿಗಳು ಇಂತಹ ಉತ್ಸವದಲ್ಲಿ ಸಂತೋಷದಿಂದ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು. ಪ್ರಾಚಾರ್ಯೆ ಡಾ. ಅನಿತಾ ರೈ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ “ಇಂತಹ ಉತ್ಸವದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಈ ಪ್ರತಿಭೋತ್ಸವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.




