Dharwad, July 29: “Today is the day of Guru Puja. Guru Purnima is celebrated in India to pay homage to one’s spiritual or educational gurus. The role of Gurus is important in shaping a person’s life,” said Raju Haibatti, Rashtriya Swayamsevak Sangh, Dharwad District Sahakaryavahra. He was speaking as the spokesperson for the Guru Puja held at Rashtrotthana Vidya Kendra – Dharwad, Neeralkatti. “Guru holds a special place in India. Especially in Hinduism, Guru Purnima has special significance. Without a Guru, a person cannot know the difference between truth and falsehood. Therefore, we celebrate Guru Purnima to pay respect to the Guru.”
ಧಾರವಾಡ, ಜು. 29: “ಇಂದು ಗುರುಪೂರ್ಣಿಮೆಯ ಪೂಜಾ ಉತ್ಸವದ ದಿನ. ಗುರು ಪೂರ್ಣಿಮೆಯು ಭಾರತದಲ್ಲಿ ತನ್ನ ಆಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ ಅವರಿಗೆ ನಮನ ಸಲ್ಲಿಸಲು ಆಚರಿಸಲಾಗುತ್ತದೆ. ಮನುಷ್ಯನ ಬದುಕನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ, ಧಾರವಾಡ ಜಿಲ್ಲಾ ಸಹಕಾರ್ಯವಾಹರಾದ ರಾಜು ಹೈಬತ್ತಿ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗುರು ಪೂಜೋತ್ಸವದ ವಕ್ತಾರರಾಗಿ ಅವರು ಮಾತನಾಡಿದರು. “ಭಾರತದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಗುರುವಿಲ್ಲದಿದ್ದರೆ ಮಾನವನಿಗೆ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ಗುರುವಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಆಚರಿಸುತ್ತೇವೆ” ಎಂದರು.


