Dharwad, May 25: “Man acquires wealth in the form of land, money and property. Gradually, that wealth gets spent. But the wealth called education increases as it is used. Therefore, students should focus on acquiring an education properly. Only when culture and values ​​are mixed with that education can a civilised society be built,” said His Holiness Sri Abhinava Dr Kottureshwar Mahaswamiji of Harlapur, Gadag. He spoke after presiding over the ‘Prathama Pata’ program held here at Rashtrotthana Vidya Kendra – Dharwad, Neeralakatta.
Sri Raghavendra Ambekara, Secretary of Rashtrotthana Vidya Kendra and Vidyalaya, presided over the program and introduced the future goals of the Rashtrotthana Parishat in his presidential address. The principal of the school, Dr. Anita Rai and the college principal, Sri Ravi Prakash S., gave their introductory remarks and explained the school’s academic progress.

ಧಾರವಾಡ, ಮೇ. 25: “ಮನುಷ್ಯನು ಭೂಮಿ, ಧನ, ಆಸ್ತಿಯ ರೂಪದಲ್ಲಿ ಸಂಪತ್ತನ್ನು ಸಂಪಾದನೆ ಮಾಡುತ್ತಾನೆ. ಕ್ರಮೇಣ ಆ ಸಂಪತ್ತು ವ್ಯಯವಾಗುತ್ತಾ ಹೋಗುತ್ತದೆ. ಆದರೆ ವಿದ್ಯೆ ಎನ್ನುವ ಸಂಪತ್ತು ಬಳಸಿದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾಸಂಪತ್ತನ್ನು ಸರಿಯಾಗಿ ಗಳಿಸುವತ್ತ ಗಮನಹರಿಸಬೇಕು. ಆ ವಿದ್ಯೆಯೊಂದಿಗೆ ಸಂಸ್ಕಾರ ಮತ್ತು ಮೌಲ್ಯವು ಬೆರೆತಾಗ ಮಾತ್ರ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯ” ಎಂದು ಗದಗ, ಹರ್ಲಾಪುರದ, ಪರಮಪೂಜ್ಯ ಶ್ರೀ ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮೀಜಿ ಇವರು ಆಶೀರ್ವದಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ʼಪ್ರಥಮ ಪಾಠʼ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ರಾಷ್ಟ್ರೋತ್ಥಾನದ ಮುಂದಿನ ಗುರಿಗಳನ್ನು ಪರಿಚಯಿಸಿದರು.ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಶ್ರೀ ರವಿಪ್ರಕಾಶ ಎಸ್. ಇವರು ಪ್ರಾಸ್ತಾವಿಕ ನುಡಿಯಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿಯನ್ನು ತೆರೆದಿಟ್ಟರು.