Dharwad, Mar. 27: “Sri Rama Navami is a festival celebrated all over the world and is one of the most important festivals in Hinduism. It is not just a festival; Rama Navami is a beacon that shows a person how to follow religion, ethics and truthfulness in life. Therefore, let us live our lives as an example to the society by following the ideals of Rama,” said teacher Sri Parvatagowda K. He spoke as the spokesperson of the Ramanavami festival held herein Rashtrotthana Vidya Kendra – Dharwad, Neeralakatti.
*Sri Harsha Bhat and Sri Ramachandra Bhat performed the puja kainkarya.
*On this occasion, a school team stood near Garaga Cross and distributed kosambari and panaka to the public and the passers-by.

ಧಾರವಾಡ, ಮಾ. 27: “ರಾಮನವಮಿ ಇಡೀ ಜಗತ್ತಿನಾದ್ಯಂತ ಆಚರಿಸುವ ಹಬ್ಬ ಹಾಗೂ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬವಲ್ಲ; ರಾಮನವಮಿಯು ಮನುಷ್ಯನಿಗೆ ಜೀವನದಲ್ಲಿ ಧರ್ಮ, ನೀತಿ ಮತ್ತು ಸತ್ಯಸಂಧತೆಯನ್ನು ಹೇಗೆ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿದೀಪವಾಗಿದೆ. ಹೀಗಾಗಿ ರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಜೀವನವನ್ನು ನಡೆಸೋಣ” ಎಂದು ಶಿಕ್ಷಕ ಶ್ರೀ ಪಾರ್ವತಗೌಡ ಕೆ. ಇವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ರಾಮನವಮಿ ಹಬ್ಬದ ವಕ್ತಾರರಾಗಿ ಅವರು ಮಾತನಾಡಿದರು.
*ಶ್ರೀ ಹರ್ಷ ಭಟ್ ಹಾಗೂ ಶ್ರೀ ರಾಮಚಂದ್ರ ಭಟ್ಟ ಇವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
*ಇದೇ ಸಂದರ್ಭದಲ್ಲಿ ಹಬ್ಬದ ಪ್ರಯುಕ್ತ ಗರಗ ಕ್ರಾಸ್ ಬಳಿ ಶಾಲೆಯ ತಂಡವೊಂದು ನಿಂತು ಸಾರ್ವಜನಿಕರು ಹಾಗೂ ಪಥಿಕರಿಗೆ ಕೋಸಂಬರಿ ಮತ್ತು ಪಾನಕವನ್ನು ವಿತರಿಸಿತು.