Dharwad, Mar. 21: “According to Hindu tradition, Ugadi is the new year. Both hardships and happiness are achieved through neem and jaggery. May the joy of Ugadi reign in everyone’s home throughout the year. May the happy days of Ugadi be repeated throughout the year. In the modern era, there are more opportunities for students to adopt something new. They should adopt something new and play an important role in making India a world guru,” said Dharwad Divisional Service Chief Sri Ningappa Madiwalara. He spoke as the spokesperson of the Ugadi festival held at the city’s Rashtroththana Vidyakendra – Dharwad, Neeralkatti.
ಧಾರವಾಡ, ಮಾ. 21: “ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯು ಹೊಸ ವರ್ಷವಾಗಿದೆ. ಬೇವು ಬೆಲ್ಲದ ಮೂಲಕ ಕಷ್ಟ-ಸುಖಗಳು ಪ್ರಾಪ್ತಿಯಾಗುತ್ತವೆ. ಇಡೀ ವರ್ಷದುದ್ದಕ್ಕೂ ಪ್ರತಿಯೊಬ್ಬರ ಮನೆಯಲ್ಲಿ ಯುಗಾದಿಯ ಸಂಭ್ರಮ ಮನೆಮಾಡಲಿ. ಯುಗಾದಿಯ ಸಂತಸದ ದಿನಗಳು ವರ್ಷದುದ್ದಕ್ಕೂ ಮರುಕಳಿಸುವಂತಾಗಲಿ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸದನ್ನು ರೂಢಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ. ಅವರು ಹೊಸತನವನ್ನು ರೂಢಿಸಿಕೊಂಡು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು” ಎಂದು ಧಾರವಾಡ ವಿಭಾಗ ಸೇವಾ ಪ್ರಮುಖರಾದ ಶ್ರೀ ನಿಂಗಪ್ಪ ಮಡಿವಾಳರ ಕರೆ ನೀಡಿದರು. ಅವರು ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಯುಗಾದಿ ಉತ್ಸವದ ವಕ್ತಾರರಾಗಿ ಮಾತನಾಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಯುಗಾದಿ ಉತ್ಸವವನ್ನು ಆಚರಿಸಲಾಯಿತು.


