Dharwad, A. 14: “The architect of the Constitution, Dr. B. R. Ambedkar, is one of the greatest leaders India has ever seen. The social movements he created were immense, and his ideas are still relevant today. His philosophies are like building a beautiful society,” said teacher Smt. Nagamma K. She spoke as the spokesperson for the Dr. B. R. Ambedkar 135th birth anniversary program held herein Rashtrotthana Vidya Kendra – Dharwad, Neeralkatti.

ಧಾರವಾಡ, ಏ. 14: “ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾರತ ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಹಿರಿದಾಗಿದ್ದು, ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರ ತತ್ವಾದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ” ಎಂದು ಶಿಕ್ಷಕಿ ಶ್ರೀಮತಿ ನಾಗಮ್ಮಾ ಕೆ. ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ವಕ್ತಾರರಾಗಿ ಅವರು ಮಾತನಾಡಿದರು.