Dharwad, Sept. 9: Vidya Bharati, Dharwad District Level Yoga Asana Competition was held herein Rashtrotthana Vidya Kendra – Dharwad, Neeralkatti. Spokesperson for the programme, Sanskrit teacher Vinayak Bhat, opined, “Yoga is a great way to deal with the stressful lifestyle in the modern era. It helps in increasing concentration, self-discipline and self-awareness.”
ಧಾರವಾಡ, ಸೆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ವಿದ್ಯಾಭಾರತಿ, ಧಾರವಾಡ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ವಕ್ತಾರರಾದ ಸಂಸ್ಕೃತ ಅಧ್ಯಾಪಕ ವಿನಾಯಕ ಭಟ್ ಇವರು, “ಆಧುನಿಕ ಯುಗದಲ್ಲಿ ಒತ್ತಡದಿಂದ ಕೂಡಿದ ಜೀವನಶೈಲಿಯನ್ನು ಎದುರಿಸಲು ಯೋಗವು ಉತ್ತಮ ಮಾರ್ಗವಾಗಿದೆ. ಇದು ಏಕಾಗ್ರತೆ, ಸ್ವಯಂ ಶಿಸ್ತು ಮತ್ತು ಸ್ವಯಂ ಅರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.


