Dharwad, Aug. 29: “A person should devote some time to sports in their daily life. Sports not only help in the physical development of a person but also in their mental development,” said student Neeraj Hadagali. He spoke as part of the National Sports Day held herein Rashtrotthana Vidya Kendra – Dharwad, Neeralkatti. “Let’s make proper use of the facilities and achieve sports achievements in the manner of the magical Dhyanachandana. Only then will the celebration of National Sports Day be meaningful,” he said, explaining Dhyanachand’s sporting achievements. On the same occasion, Principal Dr. Anita Rai honored the students who were selected for the national level as winners of the Vidya Bharati state-level table tennis game.

ಧಾರವಾಡ, ಆ. 29: “ಮನುಷ್ಯನು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆಗೆ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಕ್ರೀಡೆಯು ಕೇವಲ ಮನುಷ್ಯನ ದೈಹಿಕ ಬೆಳವಣಿಗೆ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಬೆಳೆಯಲು ಸಹಾಯಮಾಡುತ್ತದೆ” ಎಂದು ವಿದ್ಯಾರ್ಥಿ ನೀರಜ್ ಹಡಗಲಿ ಇವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಅವರು ಮಾತನಾಡಿದರು. “ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಹಾಕಿ ಮಾಂತ್ರಿಕ ಧ್ಯಾನಚಂದನ ರೀತಿಯಲ್ಲಿ ಕ್ರೀಡಾ ಸಾಧನೆಯನ್ನು ಮಾಡೋಣ. ಅಂದಾಗ ಮಾತ್ರ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ” ಎಂದು ಹೇಳಿ ಧ್ಯಾನಚಂದ್ ಅವರ ಕ್ರೀಡಾ ಸಾಧನೆ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಅನಿತಾ ರೈ ಅವರು ವಿದ್ಯಾಭಾರತಿ ರಾಜ್ಯಮಟ್ಟದ ಟೇಬಲ್ ಟೆನಿಸ್ ಆಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.