Educational Sahamilana and Teacher’s Workshop in RVK – Dharwad

Dharwad, July 13: Dharwad district unit educational Sahamilana and teacher’s workshop was organized herein Rashtrotthana Vidya Kendra – Dharwad, Neeralakatti. Sri Venkataramana, the head of regional educational and spiritual education in Vidya Bharathi, graced the event as the main spoker and shared his thoughts on the topic of ‘Integral Development’. Sri Anand Patil, a mathematics educator in Rashtrotthana Vidya Kendra in Dharwad, led a workshop on blueprint. The session covered thematic discussions on lesson planning, question paper creation, and assignment development. A total of 108 teachers from 14 schools benefited from this Sahamilana.

ಶೈಕ್ಷಣಿಕ ಸಹಮಿಲನ ಹಾಗೂ ಶಿಕ್ಷಕರ ಕಾರ್ಯಾಗಾರ
ಧಾರವಾಡ, ಜುಲೈ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಧಾರವಾಡ ಜಿಲ್ಲಾ ಘಟಕದ ಶೈಕ್ಷಣಿಕ ಸಹಮಿಲನ ಹಾಗೂ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ವಿದ್ಯಾಭಾರತಿಯ ಕ್ಷೇತ್ರೀಯ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಪ್ರಮುಖರಾದ ಶ್ರೀ ವೆಂಕಟರಮಣ ಅವರು ಮುಖ್ಯ ವಕ್ತಾರರಾಗಿ ಆಗಮಿಸಿ ‘ಸಮಗ್ರ ವಿಕಾಸ’ ಎಂಬ ವಿಷಯದ ಮೇಲೆ ತಮ್ಮ ವಿಚಾರವನ್ನು ಮಂಡಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಗಣಿತ ಶಿಕ್ಷಕರಾದ ಶ್ರೀ ಆನಂದ್ ಪಾಟೀಲ್ ಅವರು ನೀಲನಕ್ಷೆ ಕುರಿತು ಅವಧಿ ನಡೆಸಿದರು. ಪಾಠ ಯೋಜನೆ, ಪ್ರಶ್ನೆಪತ್ರಿಕೆ, ಕಾರ್ಯಪ್ರತಿ ತಯಾರಿಕೆ ಈ ವಿಷಯದ ಕುರಿತು ವಿಷಯವಾರು ಚರ್ಚೆಗಳನ್ನು ನಡೆಸಲಾಯಿತು. ಒಟ್ಟು 14 ಶಾಲೆಗಳ 108 ಶಿಕ್ಷಕರು ಸಹಮಿಲನದ ಪ್ರಯೋಜನ ಪಡೆದರು.

Scroll to Top