Dharwad, Mar 30: Ramanavami Utsav was celebrated herein Rashtrotthana Vidya Kendra with joy and fervour.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದಲ್ಲಿ ಸಂಭ್ರಮದ ರಾಮನವಮಿ ಉತ್ಸವ
ಧಾರವಾಡ, ಮಾ. 30: “ರಾಮನವಮಿ ಇಡೀ ಜಗತ್ತಿನಾದ್ಯಂತ ಆಚರಿಸುವ ಹಬ್ಬಗಳಲ್ಲಿ ಒಂದು. ಇಡೀ ಭಾರತವನ್ನು ಒಗ್ಗೂಡಿಸುವ ಶಕ್ತಿ ರಾಮ ಮಂತ್ರದಲ್ಲಿ ಅಡಗಿದೆ. ರಾಮನಂತಹ ಮಗನಾದರೆ, ರಾಮನಂತಹ ಸ್ನೇಹಿತನಾದರೆ, ರಾಮನಂತಹ ಪತಿಯಾದರೆ, ರಾಮನಂತಹ ಮಂತ್ರಿಯಾದರೆ, ರಾಮನಂತಹ ತಂದೆಯಾದರೆ, ಸಾಮಾನ್ಯ ಮನುಷ್ಯನು ಕೂಡಾ ದೇವತಾ ಪುರುಷನಾಗಬಹುದು. ಹೀಗಾಗಿ ರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಜೀವನವನ್ನು ನಡೆಸೋಣ” ಎಂದು ವಿದ್ವಾನ್ ವಿನಾಯಕ್ ಭಟ್ ಅವರು ಅಭಿಪ್ರಾಯಿಸಿದರು. ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಮನವಮಿ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತೊಟ್ಟಿಲು ಪೂಜೆ, ಶಾಲೆಯ ಶಿಕ್ಷಕರಾದ ಶ್ರೀ ರೋಹಿತ್ ಇವರಿಂದ ನೃತ್ಯ, ಸಂಗೀತ ಶಿಕ್ಷಕರಾದ ಶ್ರೀ ಸೋಮಲಿಂಗ ಇವರಿಂದ ಗಾಯನ, ವಿದ್ಯಾರ್ಥಿಗಳಿಂದ ಭಕ್ತಿಗೀತೆ, ನೃತ್ಯ, ನಾಟಕ, ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯಿಂದ ಗರಗ್ ಕ್ರಾಸ್ವರೆಗೆ ಶಾಲೆಯ 8 ಮತ್ತು 9ನೇ ತರಗತಿಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಜಾಥಾವನ್ನು ನಡೆಸಿದರು. ಈ ಸಂದರ್ಭದಲ್ಲಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಪಾನಕವನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ, ಉಪ ಪ್ರಾಂಶುಪಾಲರಾದ ಶ್ರೀ ಕೃಷ್ಣ ಜೋಶಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.