ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದಲ್ಲಿ ಪ್ರಥಮ ಪಾಠ
Prathama Patha at Rashtrotthana Vidya Kendra – Dharwad
ಧಾರವಾಡ, ಮೇ 28: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರಥಮ ಪಾಠ ಆಯೋಜಿಸಲಾಗಿದ್ದು, ವಾರಣಾಸಿಯ ಭಗವತ್ಪಾದರಾದ ಶ್ರೀಮಾನ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
Dharwad, May 28: Prathama Patha program was organised herein Rashtrotthana Vidya Kendra and Varanasi Bhagavatpad Sriman Kashi Jnana Simhasanadhishwara Sri Sri Sri 1008 Jagadguru Dr. Chandrashekhara Shivacharya gave the divine presence.
“ಮನುಷ್ಯನು ಭೂಮಿ, ಧನ, ಆಸ್ತಿಯ ರೂಪದಲ್ಲಿ ಸಂಪಾದನೆ ಮಾಡುತ್ತಾನೆ. ಕ್ರಮೇಣ ಆ ಸಂಪತ್ತು ವ್ಯಯವಾಗುತ್ತಾ ಹೋಗುತ್ತದೆ. ಆದರೆ ವಿದ್ಯೆ ಎನ್ನುವ ಸಂಪತ್ತು ಬಳಸಿದಂತೆಲ್ಲಾ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾ ಸಂಪತ್ತನ್ನು ಗಳಿಸುವತ್ತ ಗಮನ ಹರಿಸಬೇಕು. ಅಂದಾಗ ಮಾತ್ರ ಕಲಿತಿರುವ ವಿದ್ಯೆ ಜೀವನಕ್ಕೆ ದಾರಿಯಾಗಬಲ್ಲದು” ಎಂದು ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ, ರಾಷ್ಟ್ರೋತ್ಥಾನ ಪರಿಷತ್ನ ಸದಸ್ಯರಾದ ಶ್ರೀ ಅಶೋಕ ಸೋನ್ಕರ್, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.