Dharwad, Jan. 22: Paramvir Vandan program was organised herein Rashtrotthana Vidya Kendra. All India Committee Member of RSS, Sri Gunavanta Singh Kothari graced the occasion.
ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದತ್ತ ಮುಂದಾಗಲಿ: ಶ್ರೀ ಗುಣವಂತ ಸಿಂಗ್ ಕೊಠಾರಿ
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಪರಮವೀರ ವಂದನ ಕಾರ್ಯಕ್ರಮದಲ್ಲಿ
ಧಾರವಾಡ, ಜ.22: ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಮುಂದೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯನ್ನು ನೀಡುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಗುಣವಂತ ಸಿಂಗ್ ಕೊಠಾರಿಯವರು ಹೇಳಿದರು. ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಪರಮವೀರ ವಂದನ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.
ಶ್ರೀ ಅರವಿಂದ ಹುಣಸಿಗಿ ಇವರು ಜನರಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ಸಂಘಟನೆಯಾದ ‘ನೈತಿಕ ಮತ್ತು ಸಾಂಸ್ಕೃತಿಕ ತರಬೇತಿ ಪ್ರತಿಷ್ಠಾನ’ವನ್ನು ಪರಿಚಯಿಸಿ, ಅದರ ಕಾರ್ಯವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ವೀರ ಯೋಧರಾದ ಶ್ರೀ ನವೀನ ನಾಗಪ್ಪ ಇವರು ತಮ್ಮ ಅನುಭವ ಕಥನವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದ 21 ವೀರಯೋಧರನ್ನು ಪರಿಚಯಿಸಿದ ಶಾಲೆಯ ವಿದ್ಯಾರ್ಥಿಗಳಿಂದ ಯೋಧ ನಮನ ನಡೆಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸದಸ್ಯರಾದ ಶ್ರೀ ಗಣಪತಿ ಹೆಗಡೆ, ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್, ಪ್ರಾಚಾರ್ಯರಾದ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ, ಶಾಲೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಮಚಂದ್ರ ಭಟ್ ನಿರೂಪಿಸಿದರು. ಶ್ರೀ ಶಿವರಾಜ್ ಭಟ್ ಸ್ವಾಗತಿಸಿದರು. ಶ್ರೀ ಶ್ರೀಕಾಂತ್ ಕಟ್ಟಿಮನಿ ವೈಯಕ್ತಿಕ ಗೀತೆಯನ್ನು ಹಾಡಿದರು. ಶ್ರೀಮತಿ ದೀಪ ಕುಲಕರ್ಣಿ ವಂದಿಸಿದರು.