Dharwad, Mar. 29: “According to Hindu tradition, Yugadi is a new year. Both hardships and happiness are achieved through neem and jaggery. May the joy of Yugadi reign in everyone’s home throughout the year. May the happy days of Yugadi be repeated throughout the year. In the modern era, there are more opportunities for students to adopt something new. They should adopt innovation, follow the path laid down by their elders and take a step towards the change,” said Dharwad District Seva Pramukh Sri Narasappa Bhattangi. He spoke as the spokesperson of the Yugadi festival held herein Rashtrotthana Vidya Kendra – Dharwad, Neeralakatti. Yashas G. sang a personal song in the program.
ಧಾರವಾಡ, ಮಾ. 29: “ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯು ಹೊಸ ವರ್ಷವಾಗಿದೆ. ಬೇವು ಬೆಲ್ಲದ ಮೂಲಕ ಕಷ್ಟ-ಸುಖಗಳು ಪ್ರಾಪ್ತಿಯಾಗುತ್ತವೆ. ಇಡೀ ವರ್ಷದುದ್ದಕ್ಕೂ ಪ್ರತಿಯೊಬ್ಬರ ಮನೆಯಲ್ಲಿ ಯುಗಾದಿಯ ಸಂಭ್ರಮ ಮನೆಮಾಡಲಿ. ಯುಗಾದಿಯ ಸಂತಸದ ದಿನಗಳು ವರ್ಷದುದ್ದಕ್ಕೂ ಮರುಕಳಿಸುವಂತಾಗಲಿ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸದನ್ನು ರೂಢಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ. ಅವರು ಹೊಸತನವನ್ನು ರೂಢಿಸಿಕೊಂಡು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬದಲಾವಣೆಯ ಪರ್ವದತ್ತ ಹೆಜ್ಜೆ ಹಾಕಬೇಕು” ಎಂದು ಧಾರವಾಡ ಜಿಲ್ಲಾ ಸೇವಾ ಪ್ರಮುಖರಾದ ಶ್ರೀ ನರಸಪ್ಪ ಭಟ್ಟಂಗಿ ಕರೆ ನೀಡಿದರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಯುಗಾದಿ ಉತ್ಸವದ ವಕ್ತಾರರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಶಸ್ ಜಿ. ವೈಯಕ್ತಿಕ ಗೀತೆಯನ್ನು ಹಾಡಿದನು.