“Yoga is a good tool for all-round development” – Yoga Day in RVK – Dharwad

Dharwad, June 21: “Yoga is a good tool for human health and all-round development. The goal of yoga is not just to fix the body. It helps in purifying all three elements including mind, body and soul. Yoga is not exercise. Yoga is not an asana. Yoga is daily life. If you practice discipline in daily life, that becomes yoga,” said yoga practitioner Sri Vilas Kulkarni.
He spoke as the chief spokesperson at the World Yoga Day program held herein Rashtrotthana Vidya Kendra – Dharwad, Neeralakatti. Principal Dr. Anita Rai taught the Sankalpa. Yoga teacher Sri Atmanand conducted a group yoga asana. Narasimha Belgaumkar sang the Yoga Geeta.

ಧಾರವಾಡ, ಜೂ. 21: “ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲಾ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಯೋಗ ಎಂದರೆ ವ್ಯಾಯಾಮವಲ್ಲ. ಯೋಗ ಎಂದರೆ ಆಸನವಲ್ಲ. ಯೋಗ ಎಂದರೆ ನಿತ್ಯಜೀವನವಾಗಿದೆ. ನಿತ್ಯಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡರೆ ಅದೇ ಯೋಗವಾಗುತ್ತದೆ” ಎಂದು ಯೋಗ ಸಾಧಕ ಶ್ರೀ ವಿಲಾಸ ಕುಲಕರ್ಣಿ ಇವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಅನಿತಾ ರೈ ಅವರು ಸಂಕಲ್ಪವನ್ನು ಬೋಧಿಸಿದರು. ಯೋಗ ಶಿಕ್ಷಕರಾದ ಶ್ರೀ ಆತ್ಮಾನಂದ ಇವರು ಸಾಮೂಹಿಕ ಯೋಗಾಸನವನ್ನು ನಡೆಸಿಕೊಟ್ಟರು.ನರಸಿಂಹ ಬೆಳಗಾಂವಕರ್ ಯೋಗಗೀತೆಯನ್ನು ಹಾಡಿದನು.

Scroll to Top