Dharwad, Jan.10-12: Viveka Chintana program was organized herein Rashtrotthana Vidya Kendra – Dharwad, Neeralakatti every morning for three days. Jan 10 – Lecturer Sri Shasikumar T. spoke on ‘Speed Reading’. Jan 11 – Teacher Sri Manoj Khot spoke on the subject ‘How to concentrate?’ Jan 12 – Lecturer Smt. Debharathi presented the topic ‘Vivekananda’s childhood plays’.Daily Viveka Chintana started with meditation and chanting of Chagi. A Painting Competition was organized especially for children on the occasion of National Youth Day.
ಧಾರವಾಡ, ಜ. 10-12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಮೂರು ದಿನಗಳ ಕಾಲ ಪ್ರತಿದಿನ ಮುಂಜಾನೆಯ ಸಮಯದಲ್ಲಿ ವಿವೇಕ ಚಿಂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ. 10ರಂದು ಉಪನ್ಯಾಸಕರಾದ ಶ್ರೀ ಶಶಿಕುಮಾರ ಟಿ. ಇವರು ‘ವೇಗವಾಗಿ ಓದುಗಾರಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು. ಜ. 11ರಂದು ಶಿಕ್ಷಕ ಶ್ರೀ ಮನೋಜ ಖೋತ್ ಇವರು ‘ಏಕಾಗ್ರತೆ ಸಾಧಿಸುವುದು ಹೇಗೆ?’ ಎಂಬ ವಿಷಯದ ಕುರಿತು ಮಾತನಾಡಿದರು. ಜ. 12ರಂದು ಉಪನ್ಯಾಸಕಿ ಶ್ರೀಮತಿ ದೇಭಾರತಿ ಇವರು ‘ವಿವೇಕಾನಂದರು ಬಾಲ್ಯದಲ್ಲಿ ಆಡಿದ ತುಂಟಾಟಗಳು’ ಎಂಬ ವಿಷಯವನ್ನು ಪ್ರಸ್ತುತಪಡಿಸಿದರು. ಪ್ರತಿದಿನ ವಿವೇಕ ಚಿಂತನವು ಧ್ಯಾನ, ಚಾಗಿಯ ಹಾಡಿನೊಂದಿಗೆ ಪ್ರಾರಂಭವಾಯಿತು. ರಾಷ್ಟ್ರೀಯ ಯುವ ದಿನದ ವಿಶೇಷವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.