Dharwad, Jan. 10-11: A two-day teacher Refresher workshop was conducted herein Rashtrotthana Vidya Kendra –Dharwad, Niralakatti.School principal Dr. Anita Rai Inaugurating the workshop, said, “Rashtrotthana School is a school that teaches culture and values to children. Thus, training workshops will be beneficial for teachers to improve the quality of teachers.”First Day: Sessions were held by experienced teachers of the school on Panchamukhi Education, Experiential Learning, Goals Integration, Implementation of Panchamukhi Education in Classroom, Learning through Activity Based Teaching.After the sessions were over, the physical teacher of the school played a desi game-Lagori with all the teachers.In the evening, on Vaikuntha Ekadashi Day, Somalinga Guruji, the music teacher of School, sang Vithala Bhajan along with all the teachers.Second day: The expert teachers of the school took sessions on the topics of Effects of Festivals on Students, Teachers, Lesson Planning, Effective Use of Interactive Board, Lesson Plan Writing.Speaking on the occasion of Birsa Munda’s 150th birth anniversary during the afternoon session, Sri Kiran Ram, State Project Coordinator of Yuva Brigade, said, “Birsa Munda stood bravely against the injustices faced by the tribal communities during the British rule. He fought to protect the land and religion of the tribals. Ending the British political dominance and freeing the homeland from the colonial rule. Freeing is their priority was the goal,” he opined.Closing CeremonyDr. Anita Rai, Principal, Rashtrothana Vidya Kendra who came as the spokesperson of the closing program, said, “Teachers should make good use of the knowledge acquired in the two-day teacher training workshop.”Vice Principal Sri Krishna Joshi was present in the program. Sri Abhishek Das read the report. All campers were compulsorily allowed to express their views.
ಧಾರವಾಡ, ಜ.10-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಎರಡು ದಿನಗಳ ಕಾಲ ನಡೆದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ನಡೆಸಲಾಯಿತು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ,”ರಾಷ್ಟ್ರೋತ್ಥಾನ ಶಾಲೆ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿಕೊಡುವ ಶಾಲೆಯಾಗಿದೆ. ಹೀಗಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ತರಬೇತಿ ಕಾರ್ಯಾಗಾರಗಳು ಶಿಕ್ಷಕರಿಗೆ ಪ್ರಯೋಜನಕಾರಿಯಾಗಲಿದೆ” ಎಂದು ಅಭಿಪ್ರಾಯ ಪಟ್ಟರು. ಮೊದಲ ದಿನ: ಶಾಲೆಯ ಅನುಭವಿ ಶಿಕ್ಷಕರಿಂದ ಪಂಚಮುಖಿ ಶಿಕ್ಷಣ, ಪ್ರಾಯೋಗಿಕ ಕಲಿಕೆ, Goals Integration, ತರಗತಿಯಲ್ಲಿ ಪಂಚಮುಖಿ ಶಿಕ್ಷಣದ ಅನುಷ್ಠಾನ, ಚಟುವಟಿಕೆ ಆಧಾರಿತ ಬೋಧನೆ ಮೂಲಕ ಕಲಿಕೆ ಎಂಬ ವಿಷಯದ ಕುರಿತು ಅವಧಿಗಳು ನಡೆದವು. ಅವಧಿಗಳು ಮುಗಿದ ನಂತರ ಶಾಲೆಯ ದೈಹಿಕ ಶಿಕ್ಷಕರು ದೇಶಿಯ ಆಟ-ಲಗೋರಿಯನ್ನು ಎಲ್ಲಾ ಶಿಕ್ಷಕರನ್ನು ಸೇರಿಸಿ ಆಡಿಸಿದರು.ಸಂಜೆಯ ಹೊತ್ತಿನಲ್ಲಿ ವೈಕುಂಠ ಏಕಾದಶಿಯ ದಿನ ಶಾಲೆಯ ಸಂಗೀತ ಶಿಕ್ಷಕರಾದ ಸೋಮಲಿಂಗ ಗುರೂಜಿ ಇವರು ವಿಠಲನ ಭಜನೆಯನ್ನು ಎಲ್ಲಾ ಶಿಕ್ಷಕರೊಡಗೂಡಿ ಮಾಡಿದರು. ಎರಡನೇ ದಿನ: ಶಾಲೆಯ ನುರಿತ ಶಿಕ್ಷಕರು ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹಬ್ಬಗಳು ಮತ್ತು ಉತ್ಸವಗಳಿಂದಾಗುವ ಪರಿಣಾಮಗಳು, ಪಾಠ ಯೋಜನೆ, Interactive Board ನ ಪರಿಣಾಮಕಾರಿ ಬಳಕೆ, ಪಾಠಯೋಜನೆ ಬರವಣಿಗೆ ಎಂಬ ವಿಷಯದ ಕುರಿತು ಅವಧಿಗಳನ್ನು ತೆಗೆದುಕೊಂಡರು. ಆ ದಿನ ಮಧ್ಯಾಹ್ನದ ಅವಧಿಯಲ್ಲಿ ಯುವ ಬ್ರಿಗೇಡ್ ನ ರಾಜ್ಯ ಪ್ರಕಲ್ಪದ ಸಂಚಾಲಕರಾದ ಶ್ರೀ ಕಿರಣ ರಾಮ್ ಇವರು ಬಿರ್ಸಾ ಮುಂಡಾನ 150ನೇ ಜನ್ಮದಿನಾಚರಣೆಯ ನಿಮಿತ್ಯವಾಗಿ ಮಾತನಾಡುತ್ತಾ, “ಬಿರ್ಸಾ ಮುಂಡಾ ಬ್ರಿಟಿಷರ ಆಳ್ವಿಕೆಯಲ್ಲಿ ಬುಡಕಟ್ಟು ಸಮುದಾಯಗಳು ಎದುರಿಸಿದ ಅನ್ಯಾಯಗಳ ವಿರುದ್ಧ ಧೈರ್ಯದಿಂದ ನಿಂತರು. ಬುಡಕಟ್ಟು ಜನಾಂಗದ ಭೂಮಿ ಮತ್ತು ಧರ್ಮವನ್ನು ರಕ್ಷಿಸಲು ಹೋರಾಡಿದರು. ಬ್ರಿಟಿಷ್ ರಾಜಕೀಯ ಪ್ರಾಬಲ್ಯವನ್ನು ಕೊನೆಗೊಳಿಸುವುದು ಮತ್ತು ವಸಾಹತುಸಾಹಿ ಆಳ್ವಿಕೆಯಿಂದ ಜನ್ಮಭೂಮಿಯನ್ನು ಮುಕ್ತಗೊಳಿಸುವುದು ಅವರ ಪ್ರಾಥಮಿಕ ಗುರಿಯಾಗಿತ್ತು” ಎಂದು ಅಭಿಪ್ರಾಯ ಪಟ್ಟರು.ಸಮಾರೋಪ: ಸಮಾರೋಪ ಕಾರ್ಯಕ್ರಮದ ವಕ್ತಾರರಾಗಿ ಆಗಮಿಸಿದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಚಾರ್ಯರಾದ ಡಾ. ಅನಿತಾ ರೈ ಇವರು, “ಶಿಕ್ಷಕರು ಎರಡು ದಿನಗಳ ಕಾಲ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪಡೆದುಕೊಂಡ ಜ್ಞಾನವನ್ನು ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹಿತನುಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಶ್ರೀ ಕೃಷ್ಣ ಜೋಶಿ ಉಪಸ್ಥಿತರಿದ್ದರು. ಶ್ರೀ ಅಭಿಷೇಕ ದಾಸ್ ವರದಿ ವಾಚಿಸಿದರು. ಎಲ್ಲಾ ಶಿಬಿರಾರ್ಥಿಗಳು ಕಡ್ಡಾಯವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿತ್ತು.