Dharwad, Mar 11: Students of Rashtrotthana Vidya Kendra – Dharwad, Neeralakatti, Ratan Nayak, Vinayagowda Patil, Abhiraj Betageri and Ramalinga Neginahal, have been selected for the Inspire Award for the year 2024-25, run by the Government of India. They have received a prize of Rs. 10,000 each for their next work project. The Rashtrotthana Board of Directors, Principals and teaching and non-teaching staff have congratulated the students who achieved and the teachers who trained them.
ಧಾರವಾಡ, ಮಾ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯ ವಿದ್ಯಾರ್ಥಿಗಳಾದ ರತನ್ ನಾಯಕ, ವಿನಯಗೌಡ ಪಾಟೀಲ್, ಅಭಿರಾಜ್ ಬೆಟಗೇರಿ ಹಾಗೂ ರಾಮಲಿಂಗ ನೇಗಿನಹಾಳ ಇವರು ಭಾರತ ಸರಕಾರ ನಡೆಸುವ 2024-25ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್‍ಗೆ ಆಯ್ಕೆಯಾಗಿರುತ್ತಾರೆ. ಮುಂದಿನ ಕಾರ್ಯ ಯೋಜನೆಗಾಗಿ ತಲಾ ಹತ್ತು ಸಾವಿರ ರೂಗಳನ್ನು ಬಹುಮಾನವಾಗಿ ಪಡೆದಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ತರಬೇತುಗೊಳಿಸಿದ ಶಿಕ್ಷಕರನ್ನು ರಾಷ್ಟ್ರೋತ್ಥಾನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.