Dharwad, Jan 13: “Swami Vivekananda’s principles serve as a foundation for India’s global advancement today. He regarded the entire nation as his home and dedicated himself to promoting the welfare of the world from that perspective. It is essential for all of us to embrace Vivekananda’s ideals and strive towards elevating our nation to its utmost potential” said thinker Kiran Kumar Vivekavanshi. He spoke as the spokesperson of the National Youth Day program held herein Rashtrotthana Vidya Kendra – Dharwad, Niralakatti. As a part of the National Youth Day celebrations in the school, Viveka Chintana program, painting competition and entertaining games for children were organized. Chagi Gita was sung by the students.
ಧಾರವಾಡ, ಜ. 13: “ಭಾರತವು ಇಂದು ಜಾಗತಿಕವಾಗಿ ಬೆಳೆಯಲು ಸ್ವಾಮಿ ವಿವೇಕಾನಂದರ ಆದರ್ಶಗಳೇ ಕಾರಣವಾಗಿದೆ. ಸ್ವಾಮಿ ವಿವೇಕಾನಂದರು ಇಡೀ ದೇಶವನ್ನೇ ಒಂದು ಮನೆಯೆಂದು ತಿಳಿದುಕೊಂಡು ಆ ಮನೆಯ ಮೂಲಕ ಜಗತ್ತಿನ ಕಲ್ಯಾಣ ಮಾಡಲು ಹೊರಟರು. ವಿವೇಕಾನಂದರ ತತ್ವಾದರ್ಶಗಳನ್ನು ನಾವೆಲ್ಲ ರೂಢಿಸಿಕೊಂಡು ರಾಷ್ಟ್ರವನ್ನು ಪರಮ ವೈಭವದ ಕಡೆ ತೆಗೆದುಕೊಂಡು ಹೋಗುವ ಗುರಿಯ ಕಡೆಗೆ ಮುನ್ನಡೆಯಬೇಕಾಗಿದೆ” ಎಂದು ಚಿಂತಕರಾದ ಕಿರಣ ಕುಮಾರ ವಿವೇಕವಂಶಿ ಇವರು ಅಭಿಪ್ರಾಯಪಟ್ಟರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ವಕ್ತಾರರಾಗಿ ಅವರು ಮಾತನಾಡಿದರು.ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ವಿವೇಕ ಚಿಂತನ ಕಾರ್ಯಕ್ರಮ, ಚಿತ್ರಕಲೆ ಸ್ಪರ್ಧೆ, ಮಕ್ಕಳಿಗಾಗಿ ಮನರಂಜನಾ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳಿಂದ ಚಾಗಿ ಗೀತೆಯ ಗಾಯನ ನಡೆಯಿತು.