Dharwad, Nov. 26: Kartik Deepotsava was celebrated herein Rashtrotthana Vidya Kendra – Dharwad, Neeralkatti. Sri Vinayak Bhat, Sanskrit teacher of the school, who arrived as a spokesperson, said, “All of us born in India are virtuous. There is unity in diversity here. Even though there are many languages and religions in the country, we feel that we are all one. Let us preserve and develop the culture and diversity of the land here, and love the motherland and make it clean and green.” School Secretary Sri Raghavendra Ambekar and Neeralkatti village elders Sri R. S. Patil, who were present at the program, said good words to the children. Gou puja, Bharat Mata Puja, Tulsi Puja, and cultural programs were performed by the children in the program. The Principal Dr. Anita Rai, Administrator Sri Kumaraswamy Kulkarni, Vice Principal Sri Krishna Joshi, Smt. Rekha Ambekar, Sri Gururaja Agadi, Sri M. N. Mathapati, Sri Ashwin Boosare, former Taluk Panchayat members Sri Mahadevappa Dandina, and villagers of Neeralakatti were present. The school music teacher Sri J.K. Somalinga sang a personal song. Sri Harsha Bhat and Sri Ramachandra Bhat performed the puja.
ಧಾರವಾಡ, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು.
ವಕ್ತಾರರಾಗಿ ಆಗಮಿಸಿದ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ವಿನಾಯಕ ಭಟ್ ಇವರು, “ಭಾರತ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಇಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ದೇಶದಲ್ಲಿ ಅನೇಕ ಭಾಷೆ, ಧರ್ಮಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿದೆ. ಇಲ್ಲಿನ ನೆಲದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮಾತೃಭೂಮಿಯನ್ನು ಪ್ರೀತಿಸಿ ಸ್ವಚ್ಛ ಮತ್ತು ಹಸಿರು ಮಾಡೋಣ” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್ ಹಾಗೂ ನೀರಲಕಟ್ಟಿ ಗ್ರಾಮದ ಹಿರಿಯರಾದ ಶ್ರೀ ಆರ್. ಎಸ್. ಪಾಟೀಲ ಇವರು ಮಕ್ಕಳಿಗೆ ಹಿತ ನುಡಿದರು. ಕಾರ್ಯಕ್ರಮದಲ್ಲಿ ಗೋಪೂಜೆ, ಭಾರತ ಮಾತಾ ಪೂಜನ, ತುಳಸಿ ಪೂಜೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ, ಉಪ ಪ್ರಾಚಾರ್ಯರಾದ ಶ್ರೀ ಕೃಷ್ಣ ಜೋಶಿ, ಶ್ರೀಮತಿ ರೇಖಾ ಅಂಬೇಕರ್, ಶ್ರೀ ಗುರುರಾಜ ಅಗಡಿ, ಶ್ರೀ ಎಂ. ಎನ್. ಮಠಪತಿ, ಶ್ರೀ ಅಶ್ವಿನ್ ಬೂಸಾರೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀ ಮಹದೇವಪ್ಪ ದಂಡಿನ, ಹಾಗೂ ನೀರಲಕಟ್ಟಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲೆಯ ಸಂಗೀತ ಗುರುಗಳಾದ ಶ್ರೀ ಜೆ.ಕೆ. ಸೋಮಲಿಂಗ ಇವರು ವೈಯಕ್ತಿಕ ಗೀತೆಯನ್ನು ಹಾಡಿದರು. ಶ್ರೀ ಹರ್ಷ ಭಟ್ ಹಾಗೂ ಶ್ರೀ ರಾಮಚಂದ್ರ ಭಟ್ ಇವರು ಪೂಜಾ ಕಾರ್ಯವನ್ನು ನೆರವೇರಿಸಿದರು.