Hindu Samrajyotsava in RVK – Dharwad

Dharwad, June 9: “Today is Hindu Samrajyotsava. It is the coronation day of Chhatrapati Shivaji Maharaj. Shivaji Maharaj had immense respect and devotion for his religion and nationalism even in his childhood. That is why he built a strong Hindu empire later. Today, not only India but the entire world needs the shelter of Hindutva. If the country is to become a world teacher, the feeling that we are all one, we are all brothers, we are all Hindus needs to be ingrained in us,” said Govindappa Gowdappagol, a retired officer of the Deputy Commissioner of Commercial Taxes.
He spoke as the spokesperson of the Hindu Samrajyotsava held herein Rashtrotthana Vidya Kendra – Dharwad, Neeralkatti.
“There are three main reasons for Shivaji’s achievement. The first is his great devotion. The second is fearlessness, and the third is love for the nation. Today’s students can achieve success by inculcating those three qualities in themselves.”

ಧಾರವಾಡ, ಜೂ. 9: “ಇಂದು ಹಿಂದೂ ಸಾಮ್ರಾಜ್ಯೋತ್ಸವ ದಿನ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನ. ಶಿವಾಜಿ ಮಹಾರಾಜರು ಚಿಕ್ಕಂದಿನಲ್ಲಿಯೇ ತನ್ನ ಧರ್ಮ, ರಾಷ್ಟ್ರೀಯತೆಯ ಬಗ್ಗೆ ಅಪಾರ ಗೌರವ-ಶ್ರದ್ಧೆಯನ್ನು ಹೊಂದಿದ್ದರು. ಅದರಿಂದಾಗಿಯೇ ಮುಂದೆ ಬಲಿಷ್ಠ ಹಿಂದೂ ಸಾಮ್ರಾಜ್ಯವನ್ನು ಕಟ್ಟಿದರು. ಇಂದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಹಿಂದುತ್ವದ ಆಶ್ರಯ ಬೇಕಾಗಿದೆ. ದೇಶ ವಿಶ್ವಗುರುವಾಗಬೇಕಾದರೆ ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು, ನಾವೆಲ್ಲರೂ ಹಿಂದೂ ಎಂಬ ಭಾವನೆ ನಮ್ಮಲ್ಲಿ ಬೇರೂರಬೇಕಾಗಿದೆ” ಎಂದು ಡೆಪ್ಯೂಟಿ ಕಮಿಷನರ್ ಆಫ್ ಕಮರ್ಷಿಯಲ್ ಟ್ಯಾಕ್ಸಸ್ ನ ನಿವೃತ್ತ ಅಧಿಕಾರಿಗಳಾದ ಗೋವಿಂದಪ್ಪ ಗೌಡಪ್ಪಗೋಳ ಇವರು ಅಭಿಪ್ರಾಯಸಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವದ ವಕ್ತಾರರಾಗಿ ಅವರು ಮಾತನಾಡಿದರು.
“ಶಿವಾಜಿಯ ಸಾಧನೆಗೆ ಪ್ರಮುಖವಾಗಿ ಮೂರು ಕಾರಣಗಳು. ಮೊದಲನೆಯದು ಅವನಲ್ಲಿರುವ ಅತೀವ ಶ್ರದ್ಧೆ. ಎರಡನೆಯದು ನಿರ್ಭಯ, ಮೂರನೆಯದು ರಾಷ್ಟ್ರ ಪ್ರೇಮ. ಇಂದಿನ ವಿದ್ಯಾರ್ಥಿಗಳು ಆ ಮೂರು ಗುಣಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳುವುದರ ಮೂಲಕ ಯಶಸ್ಸು ಗಳಿಸಲು ಸಾಧ್ಯ” ಎಂದು ಹೇಳಿದರು.

Scroll to Top