Dharwad, Aug. 14: “The partition of the country is the great national tragedy that occurred at the midnight of August 14, 1947, when India was celebrating its independence. This is not only an event that divided India. It is a great betrayal of the thousands of martyred patriots who sacrificed their lives for freedom. We all need to join hands in the effort to reunite the divided India,” said Sri Gururaj Agadi, Correspondent of Rashtrotthana Vidya Kendra, Sattur. He spoke as the spokesperson of the Akhand Bharat Sankalpa Day program held herein Rashtrotthana Vidya Kendra – Dharwad, Neeralkatti on the midnight of August 14. On this occasion, a midnight torch-light procession was taken out by the students of the school. Sri Vinayak Bhat, a senior teacher of the school, preached the Sankalpa. Sangeeta Bhat sang a personal song.
ಧಾರವಾಡ, ಆ. 14: “1947 ಆಗಸ್ಟ್ 14ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಬಂತೆಂದು ಸಂಭ್ರಮಿಸುವ ಆ ಕ್ಷಣದ ಜೊತೆಗೆ ಘಟಿಸಿದ ರಾಷ್ಟ್ರೀಯ ಮಹಾ ದುರಂತವೇ ದೇಶ ವಿಭಜನೆ. ಇದು ಕೇವಲ ಭಾರತವನ್ನು ಭಗ್ನಗೊಳಿಸಿದ ಘಟನೆ ಮಾತ್ರವಲ್ಲ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದ ಸಹಸ್ರಾರು ಹುತಾತ್ಮ ದೇಶಭಕ್ತರಿಗೆ ಎಸಗಿದ ಮಹಾ ದ್ರೋಹವಾಗಿದೆ. ನಾವೆಲ್ಲರೂ ವಿಭಜನೆಗೊಂಡ ಭಾರತವನ್ನು ಪುನ: ಜೋಡಿಸುವ ಪ್ರಯತ್ನಕ್ಕೆ ಕೈಜೋಡಿಸಬೇಕಾಗಿದೆ” ಎಂದು ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕರೆಸ್ಪಾಂಡೆಂಟ್ ಶ್ರಿ ಗುರುರಾಜ ಅಗಡಿ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಅಗಸ್ಟ್ 14ರ ಮಧ್ಯರಾತ್ರಿಯಂದು ನಡೆದ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಮಧ್ಯರಾತ್ರಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ವಿನಾಯಕ ಭಟ್ ಅವರು ಸಂಕಲ್ಪವನ್ನು ಬೋಧಿಸಿದರು. ಸಂಗೀತಾ ಭಟ್ ವೈಯಕ್ತಿಕ ಗೀತೆಯನ್ನು ಹಾಡಿದರು.