Dharwad, Jun. 2: The inauguration of the new hostel building of Rashtrotthana Pre-University College – Dharwad, Mammigatti and the commencement of the first PUC students were organized.
Sri Raghunandan, Akhil Bharatiya Co-coordinator, Pragya Pravaha of Rashtriya Swayamsevak Sangh, who arrived as a guest at the program, said, “India should become rich. India should become rich, it means that Indians should become rich. If Indians want to become rich, a great India can be built only when the conduct and ability of children are increased.”
Sri Jayanna H, Administrative Head of Rashtrotthana CBSE Schools, North Cluster, who was the president, in his presidential address, opined that “The minds of college children are wandering minds. If some seeds of culture are sown in such minds, the future of the children will be bright.”
Sri Raghavendra Ambekar, Secretary of Rashtrotthana Vidyalaya and Vidya Kendra, introduced the projects of the Rashtrotthana Parishath in his introductory remarks.
ಧಾರವಾಡ, ಜೂ. 2: ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು – ಧಾರವಾಡ, ಮಮ್ಮಿಗಟ್ಟಿಯ ನೂತನ ವಸತಿ ನಿಲಯ ಕಟ್ಟಡದ ಲೋಕಾರ್ಪಣೆ ಹಾಗೂ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಪ್ರಜ್ಞಾಪ್ರವಾಹ, ಅಖಿಲ ಭಾರತೀಯ ಸಹ ಸಂಯೋಜಕರಾದ ಶ್ರೀ ರಘುನಂದನ ಅವರು, “ಭಾರತ ಶ್ರೀಮಂತವಾಗಬೇಕು. ಭಾರತ ಶ್ರೀಮಂತವಾಗಬೇಕು ಎಂದರೆ ಭಾರತೀಯರು ಶ್ರೀಮಂತರಾಗಬೇಕು ಎಂದರ್ಥ. ಭಾರತೀಯರು ಶ್ರೀಮಂತರಾಗಬೇಕಾದರೆ ಮಕ್ಕಳಲ್ಲಿ ನಡತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ” ಎಂದರು.
ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ. ಶಾಲೆಗಳು ಉತ್ತರ ವಲಯ, ಆಡಳಿತಾತ್ಮಕ ಪ್ರಮುಖರಾದ ಶ್ರೀ ಜಯಣ್ಣ ಎಚ್ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ “ಕಾಲೇಜು ಮಕ್ಕಳ ಮನಸ್ಸು ಎತ್ತೆಂದರಲ್ಲಿ ಅಲೆದಾಡುವ ಮನಸ್ಸು. ಅಂತಹ ಮನಸ್ಸಿನಲ್ಲಿ ಒಂದಿಷ್ಟು ಸಂಸ್ಕಾರದ ಬೀಜವನ್ನು ಬಿತ್ತಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಲ್ಪಗಳನ್ನು ಪರಿಚಯಿಸಿದರು.