Dharwad, Apr. 6: Sri Ram Navami was celebrated herein Rashtrotthana Vidya Kendra – Dharwad, Neeralakatti. Speaking as the Chief Spokesperson on the occasion, Social Science teacher Sri Sunil Shirali said, “Ram Navami is a festival celebrated all over the world and is one of the most important festivals in Hinduism. It is not just a festival; Ram Navami is a beacon that shows a person how to follow religion, ethics and truthfulness in life. Therefore, let us live our lives as an example to the society by following the ideals of Rama.”At the end of the program, a procession was taken out from the school to Garag Cross by the students and staff of the school. And on the occasion of the festival, Panaka and Kosumbari were distributed to the public.
ಧಾರವಾಡ, ಏ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಸಮಾಜ ವಿಜ್ಞಾನ ಶಿಕ್ಷಕ ಶ್ರೀ ಸುನೀಲ್ ಶಿರಾಲಿ ಅವರು “ರಾಮನವಮಿ ಇಡೀ ಜಗತ್ತಿನಾದ್ಯಂತ ಆಚರಿಸುವ ಹಬ್ಬ ಹಾಗೂ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬವಲ್ಲ; ರಾಮನವಮಿಯು ಮನುಷ್ಯನಿಗೆ ಜೀವನದಲ್ಲಿ ಧರ್ಮ, ನೀತಿ ಮತ್ತು ಸತ್ಯಸಂಧತೆಯನ್ನು ಹೇಗೆ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿದೀಪವಾಗಿದೆ. ಹೀಗಾಗಿ ರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಜೀವನವನ್ನು ನಡೆಸೋಣ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯಿಂದ ಗರಗ್ ಕ್ರಾಸ್ ವರೆಗೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಪಾನಕ ಹಾಗೂ ಕೋಸುಂಬರಿಯನ್ನು ಹಂಚಲಾಯಿತು.