Dharwad, Feb. 28: A celebration program was organized herein Rashtrotthana Vidya Kendra – Dharwad, Neeralkatti to celebrate the sixty years of the Rashtrotthana Parishad. The program’s spokesperson, Sanskrit teacher Sri Vinayak Bhat, said, “Rashtrotthana Parishad is completing sixty years. Now it has grown and stands proudly. The path to be taken is long. Let us all prepare for the next long journey,” and opened the path taken by the Rashtrotthana Parishad. A video presentation was held on the activities of the Rashtrotthana Parishad. Music teacher Sri Somalinga J. sang a personal song. Teachers Sri Shivaraj Bhat and Sri Anand Patil recited a poem composed by themselves.
ಧಾರವಾಡ, ಫೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಅರವತ್ತು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಸಂಭ್ರಮಾಚರಣೆಯ ಷಷ್ಠ್ಯಬ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವಕ್ತಾರಾದ ಸಂಸ್ಕೃತ ಅಧ್ಯಾಪಕ ಶ್ರೀ ವಿನಾಯಕ್ ಭಟ್ ಅವರು, “ರಾಷ್ಟ್ರೋತ್ಥಾನ ಪರಿಷತ್ತಿಗೆ ಅರವತ್ತು ವರ್ಷ ತುಂಬುತ್ತಿದೆ. ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾಗಬೇಕಾದ ದಾರಿ ಸುಧೀರ್ಘವಾಗಿದೆ. ಮುಂದಿನ ಸುದೀರ್ಘ ಪಯಣಕ್ಕೆ ನಾವೆಲ್ಲರೂ ಸಿದ್ಧರಾಗೋಣ” ಎಂದು ಕರೆ ನೀಡಿ, ರಾಷ್ಟ್ರೋತ್ಥಾನ ಪರಿಷತ್ ನಡೆದು ಬಂದ ದಾರಿಯನ್ನು ತೆರೆದಿಟ್ಟರು. ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ವಿಡಿಯೋ ಪ್ರದರ್ಶನ ನಡೆಯಿತು. ಸಂಗೀತ ಶಿಕ್ಷಕ ಶ್ರೀ ಸೋಮಲಿಂಗ ಜೆ. ಇವರು ವೈಯಕ್ತಿಕ ಗೀತೆಯನ್ನು ಹಾಡಿದರು. ಶಿಕ್ಷಕರಾದ ಶ್ರೀ ಶಿವರಾಜ ಭಟ್ ಹಾಗೂ ಶ್ರೀ ಆನಂದ್ ಪಾಟೀಲ್ ಇವರು ಸ್ವರಚಿತ ಕವನವನ್ನು ವಾಚಿಸಿದರು.