Dharwad, Jan. 26: “January 26, 1950 is the day India implemented its constitution. The day it abandoned monarchy and established its existence in democracy. India is a country that considers its citizens as its rulers,” said retired Indian Army Captain Sri Girish. They were speaking as the Chief Guest at the Republic Day program held herein Rashtrotthana Vidya Kendra – Dharwad, Neeralkatti.“The success of democracy is in the hands of the common people. Therefore, the youth and students of the country should understand their responsibility and walk. Since today’s children are tomorrow’s citizens, the heavy responsibility of building a prosperous nation lies with today’s children,” they said. The school principal, Dr. Anita Rai, delivered the presidential address and extended greetings on the special day.The program included speeches by students, speeches by teachers, patriotic songs, dance, exercise performances, and a parade by the NCC team.
ಧಾರವಾಡ, ಜ. 26: “1950 ಜನವರಿ 26 ಭಾರತವು ತನ್ನ ಸಂವಿಧಾನ ಜಾರಿಗೊಳಿಸಿದ ದಿನ. ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ ದಿನ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶ ಭಾರತವಾಗಿದೆ” ಎಂದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಶ್ರೀ ಗಿರೀಶ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಭ್ಯಾಗತರಾಗಿ ಅವರು ಮಾತನಾಡಿದರು. “ಪ್ರಜಾಪ್ರಭುತ್ವದ ಯಶಸ್ಸು ಸಾಮಾನ್ಯ ಜನರ ಕೈಯಲ್ಲಿದೆ. ಹೀಗಾಗಿ ದೇಶದ ಯುವಜನತೆ, ವಿದ್ಯಾರ್ಥಿಗಳು ತಮ್ಮ ಹೊಣೆಯನ್ನು ಅರಿತು ನಡೆಯಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾದ್ದರಿಂದ ಸಮೃದ್ಧ ರಾಷ್ಟ್ರವನ್ನು ಕಟ್ಟುವ ಗುರುತರ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ” ಎಂದರು. ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ವಿಶೇಷ ದಿನದ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ನಿಮಿತ್ತವಾಗಿ ವಿದ್ಯಾರ್ಥಿಗಳಿಂದ ಭಾಷಣ, ಶಿಕ್ಷಕರಿಂದ ಭಾಷಣ, ದೇಶಭಕ್ತಿ ಗೀತೆ ಗಾಯನ, ನೃತ್ಯ, ವ್ಯಾಯಾಮ ಪ್ರದರ್ಶನ, ಎನ್.ಸಿ.ಸಿ. ತಂಡದಿಂದ ಪಥಸಂಚಲನ ನಡೆಯಿತು.