Dharwad, Jan. 15: “India is a land of festivals. Makar Sankranti is a festival celebrated all over the country. Celebration of the festival increases love, trust and bonding among people. Relatives and friends come together on the day of Sankranti. Sharing sweets and eating with each other strengthens mutual relations. The celebration is losing its past excitement, we need to make an effort to bring back that excitement” said Sri Santhosh Poojary, member of the executive committee of the Rashtriya Swayamsevak Sangh. He served as the chief speaker at the Sankranti Utsav, which took place herein Rashtrotthana Vidya Kendra – Dharwad, Niralakatti. Shreyas Barakera welcomed and introduced. Mrityunjaya Hosur sang a personal song. Karthika K. Narrated.
ಧಾರವಾಡ, ಜ.15: “ಭಾರತ ದೇಶ ಹಬ್ಬಗಳ ತವರೂರಾಗಿದೆ. ಮಕರ ಸಂಕ್ರಾಂತಿ ಇಡೀ ದೇಶದಾದ್ಯಂತ ಆಚರಿಸುವ ಹಬ್ಬ. ಹಬ್ಬದ ಆಚರಣೆಯಿಂದ ಜನರಲ್ಲಿ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಸಂಕ್ರಾಂತಿಯ ದಿನದಂದು ಸಂಬಂಧಿಕರು, ಸ್ನೇಹಿತರು ಒಟ್ಟಿಗೆ ಸೇರುತ್ತಾರೆ. ಸಿಹಿ ಪದಾರ್ಥಗಳನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುವುದರಿಂದ ಪರಸ್ಪರ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಆದರೆ ಪ್ರಸ್ತುತ ಕಾಲದಲ್ಲಿ ಹಬ್ಬಗಳ ಆಚರಣೆಯು ಹಿಂದಿನ ಸಂಭ್ರಮ, ಸಡಗರವನ್ನು ಕಳೆದುಕೊಳ್ಳುತ್ತಿದೆ. ಆ ಸಂಭ್ರಮ, ಸಡಗರವನ್ನು ಮರಳಿ ತರುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸಂತೋಷ ಪೂಜಾರಿ ಇವರು ಅಭಿಪ್ರಾಯ ಪಟ್ಟರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಸಂಕ್ರಾಂತಿ ಉತ್ಸವದ ಮುಖ್ಯ ವಕ್ತಾರರಾಗಿ ಮಾತನಾಡಿದರು. ಶ್ರೇಯಸ್ ಬಾರಕೇರ ಸ್ವಾಗತಿಸಿ, ಪರಿಚಯಿಸಿದನು. ಮೃತ್ಯುಂಜಯ ಹೊಸೂರ ವೈಯಕ್ತಿಕ ಗೀತೆಯನ್ನು ಹಾಡಿದರು. ಕಾರ್ತಿಕ ಕೆ. ನಿರೂಪಿಸಿದನು.