Dharwad, Dec. 11: “The teaching of the Bhagavad Gita is an episode that comes in the Bhishma Parva of the Mahabharata. It is not just a teaching that Lord Krishna taught to Arjuna. It is a teaching that he taught to the entire human race. To understand Hinduism, one must read the Bhagavad Gita. If one studies the Bhagavad Gita, there is no need to study the rest of the scriptures. Because the Bhagavad Gita is the right path to achieve human perfection and salvation,” said Hindi teacher Sri Santosh Sannammanvara at the Gita Jayanti program held herein Rashtrotthana Vidya Kendra – Dharwad, Neeralkatti. Student Ku. Amaresh Hegde spoke about the importance of the Bhagavad Gita. All the students recited the ninth chapter of the Bhagavad Gita along with the teacher. Gita Saptaha was organized in the school for the past one week. Dr. Anita Rai, the principal of the school, congratulated the students who participated in various district-level competitions organized by Swarnavalli Mahasamsthan under the Bhagavad Gita Abhiyan and wished them well for the next competition. Sri Arvind Bhat performed the Bhagavad Gita Puja.
ಧಾರವಾಡ, ಡಿ. 11: “ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವ ಪ್ರಸಂಗವೇ ಭಗವದ್ಗೀತೆ ಬೋಧನೆ. ಅದು ಶ್ರೀಕೃಷ್ಣನು ಕೇವಲ ಅರ್ಜುನನಿಗೆ ಬೋಧಿಸಿದ ಉಪದೇಶವಲ್ಲ. ಇಡೀ ಮಾನವ ಕುಲಕ್ಕೆ ಬೋಧಿಸಿದ ಉಪದೇಶವಾಗಿದೆ. ಹಿಂದೂ ಧರ್ಮವನ್ನು ಅರ್ಥೈಸಿಕೊಳ್ಳಬೇಕಾದರೆ ಭಗವದ್ಗೀತೆಯನ್ನು ಓದಬೇಕು. ಭಗವದ್ಗೀತೆ ಅಧ್ಯಯನ ಮಾಡಿದರೆ ಉಳಿದ ಶಾಸ್ತ್ರಗಳ ಅಧ್ಯಯನ ಬೇಕಿಲ್ಲ. ಏಕೆಂದರೆ ಭಗವದ್ಗೀತೆ ಎನ್ನುವುದು ಮಾನವ ಪರಿಪೂರ್ಣತೆ ಸಾಧಿಸಲು ಹಾಗೂ ಮೋಕ್ಷ ಗಳಿಸಲು ಇರುವ ಸನ್ಮಾರ್ಗವಾಗಿದೆ” ಎಂದು ಹಿಂದಿ ಶಿಕ್ಷಕರಾದ ಶ್ರೀ ಸಂತೋಷ ಸಣ್ಣಮ್ಮನ್ನವರ ಇವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಪಟ್ಟರು. ವಿದ್ಯಾರ್ಥಿ ಕು. ಅಮರೇಶ ಹೆಗಡೆ ಭಗವದ್ಗೀತೆಯ ಮಹತ್ತ್ವದ ಕುರಿತು ಮಾತನಾಡಿದನು. ಎಲ್ಲ ವಿದ್ಯಾರ್ಥಿಗಳು ಶಿಕ್ಷಕರೊಡಗೂಡಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಪಾರಾಯಣ ಮಾಡಿದರು. ಶಾಲೆಯಲ್ಲಿ ಕಳೆದ ಒಂದು ವಾರದಿಂದ ಗೀತಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಪ್ರಾಚಾರ್ಯರಾದ ಡಾ ಅನಿತಾ ರೈ ಇವರು ಸ್ವರ್ಣವಲ್ಲಿ ಮಹಾಸಂಸ್ಥಾನವು ಭಗವದ್ಗೀತಾ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದರು. ಶ್ರೀ ಅರವಿಂದ ಭಟ್ ಭಗವದ್ಗೀತಾ ಪೂಜಾಕಾರ್ಯವನ್ನು ನೆರವೇರಿಸಿದರು.