Dharwad, Nov. 15: “Sports are essential for physical, mental, educational and social development. Therefore, let us build a strong India by participating in yoga, pranayama and sports daily,” called state-level bodybuilder Sri Milan Kamble. He spoke as the spokesperson for the inaugural ceremony of the sports festival held herein Rashtrotthana Vidya Kendra – Dharwad, Neeralkatti. “Students should not compare themselves to others. There is immense potential hidden in everyone. Achievement is possible only if we have self-confidence and determination,” he said.
The school principal, Dr. Anita Rai, delivered the presidential address.
Saraswati Vandana, individual song singing, procession, flag hoisting, singing of the inaugural mantra, acceptance of the oath, arrival of the sports torch etc. were held. Sports competitions will be held at the school for two days.
ಧಾರವಾಡ, ನ. 15: “ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಕ್ರೀಡೆ ಅತ್ಯವಶ್ಯಕ. ಹೀಗಾಗಿ ದಿನನಿತ್ಯ ಯೋಗ, ಪ್ರಾಣಾಯಾಮ ಮತ್ತು ಕ್ರೀಡೆಯಲ್ಲಿ ಪಾಲ್ಗೊಂಡು ಸದೃಢ ಭಾರತವನ್ನು ಕಟ್ಟೋಣ” ಎಂದು ರಾಜ್ಯಮಟ್ಟದ ದೇಹದಾರ್ಢ್ಯ ಪಟು ಶ್ರೀ ಮಿಲನ್ ಕಾಂಬಳೆ ಅವರು ಕರೆ ನೀಡಿದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ನಡೆದ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ವಕ್ತಾರರಾಗಿ ಅವರು ಮಾತನಾಡಿದರು. “ವಿದ್ಯಾರ್ಥಿಗಳು ತಮ್ಮನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಲ್ಲಿಯೂ ಅಗಾಧವಾದ ಸಾಮರ್ಥ್ಯ ಅಡಗಿದೆ. ನಮ್ಮಲ್ಲಿ ಆತ್ಮವಿಶ್ವಾಸ, ದೃಢತೆ ಇದ್ದರೆ ಮಾತ್ರ ಸಾಧನೆ ಸಾಧ್ಯ” ಎಂದರು.
ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸರಸ್ವತಿ ವಂದನಾ, ವೈಯಕ್ತಿಕ ಗೀತ ಗಾಯನ, ಪಥ ಸಂಚಲನ, ಧ್ವಜಾರೋಹಣ, ಉದ್ಘಾಟನಾ ಮಂತ್ರ, ಗಾಯನ, ಪ್ರತಿಜ್ಞಾವಿಧಿ ಸ್ವೀಕಾರ, ಕ್ರೀಡಾ ಜ್ಯೋತಿ ಆಗಮನ ಮುಂತಾದ ಕಾರ್ಯಕ್ರಮಗಳು ಜರುಗಿದವು. ಶಾಲೆಯಲ್ಲಿ ಎರಡು ದಿನಗಳ ಕಾಲ ಆಟೋಟ ಸ್ಪರ್ಧೆಗಳು ನಡೆಯಲಿವೆ.